ಮಂಗಳೂರು: ಎಸ್ಕೆಎಸ್ಸೆಸ್ಸೆಫ್‌ನ ವಿಖಾಯ ತಂಡದ ಸಮಾಜ ಮುಖಿ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಕಾಳಜಿ ಎಲ್ಲರಿಗೂ ಮಾದರಿ ಎಂದು ಸುರತ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಪುನೀತ್ ಗಾಂವ್ಕರ್ ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗ ದ.ಕ. ಜಿಲ್ಲೆ ಸಹಭಾಗಿತ್ವದಲ್ಲಿ ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್ ವಲಯದ ಜಂಟಿ ಆಶ್ರಯದಲ್ಲಿ ಚೊಕ್ಕಬೆಟ್ಟು ಎಮ್.ಜೆ.ಎಮ್ . ಸಭಾಂಗಣದಲ್ಲಿ ಸೋಮವಾರ ನಡೆದ ಬೃಹತ್ ರಕ್ತ ದಾನ, ಪ್ಲಾಸ್ಮಾ ದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಎಸ್.ವೈ.ಎಸ್. ಅಧ್ಯಕ್ಷ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿದರು.
ಎಸ್ಕೆಎಸ್ಸೆಸ್ಸೆಫ್ ಸುರತ್ಕಲ್ ವಲಯ ಉಪಾಧ್ಯಕ್ಷ ಕಮಾಲ್ ಚೊಕ್ಕಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಸೂರಿಂಜೆ ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ ದುವಾ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದ ಅಧ್ಯಕ್ಷ ಸೈಯ್ಯದ್ ಇಸ್ಮಾಯಿಲ್ ತಂಙಳ್, ಚೊಕ್ಕಬೆಟ್ಟು ಮಸೀದಿ ಅಧ್ಯಕ್ಷ ಅಮೀರ್ ಹಸೈನ್, ಸೂರಿಂಜೆ ಜುಮಾ ಮಸೀದಿ ಕಾರ್ಯದರ್ಶಿ ಲಿಯಾಕತ್ ಅಲಿ, ಚೊಕ್ಕಬೆಟ್ಟು ಎಂ.ಜೆ.ಎಮ್. ಕಾರ್ಯದರ್ಶಿ ನವಾಝ್ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ 61 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಸುರತ್ಕಲ್ ವಲಯದ ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು, ಗಣ್ಯರು ಹಾಜರಿದ್ದರು.
Kshetra Samachara
29/09/2020 12:08 am