ಕಡಬ: ಕಡಬದ ಪ್ರಸಿದ್ಧ ಉದ್ಯಮಿ ಅಮ್ಮೂಸ್ ಸ್ಟೋರ್ ಮಾಲೀಕ ತಂಗಚ್ಚನ್(66) ಹೃದಯಾಘಾತದಿಂದ ಇಂದು ನಿಧನರಾದರು.
ಹಲವಾರು ವರ್ಷಗಳಿಂದ ಕಡಬದಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ತಂಗಚ್ಚನ್, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಮನೆಯಲ್ಲಿ ಅವರಿಗೆ ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತಾದರೂ ಅದಾಗಲೇ ಅವರು ನಿಧನರಾಗಿದ್ದರು.
ದಿವಂಗತರ ಅಂತ್ಯಸಂಸ್ಕಾರ ನಾಳೆ ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚಿನಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ. ಅವರಿಗೆ ಪತ್ನಿ, ಪುತ್ರಿ, ಅಳಿಯ, ಮೊಮ್ಮಕ್ಕಳು ಇದ್ದಾರೆ.
Kshetra Samachara
25/10/2020 09:57 pm