ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಸರಕಾರದಿಂದ ಮೂಲ ಸೌಕರ್ಯಗಳಿಗೆ ಒತ್ತು, ಜನರ ಸಹಕಾರ ಅಗತ್ಯ"

ಮುಲ್ಕಿ: ಮುಲ್ಕಿ ನ.ಪಂ. ವ್ಯಾಪ್ತಿಯಲ್ಲಿ ಸುಮಾರು 18 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ಬಪ್ಪನಾಡು ಗ್ರಾಮದ ಬಡಗುಹಿತ್ಲು ದಿ.ಶೇಖರ್ ವಿ. ಕೋಟ್ಯಾನ್ ರಸ್ತೆಯನ್ನು ಶಾಸಕ ಉಮನಾಥ್ ಕೋಟ್ಯಾನ್ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ಮುಲ್ಕಿ-ಮೂಡಬಿದ್ರೆ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರ ನಾನಾ ಅನುದಾನದಲ್ಲಿ ಮೂಲ ಸೌಕರ್ಯಗಳಿಗೆ ಒತ್ತು ನೀಡುತ್ತಿದ್ದು, ಕಾಮಗಾರಿ ನಡೆಸಲು ಜನರ ಸಹಕಾರ ಅಗತ್ಯ ಎಂದರು.

ಬಿಜೆಪಿ ಮುಲ್ಕಿ- ಮೂಡಬಿದ್ರೆ ಕ್ಷೇತ್ರಾದ್ಯಕ್ಷ ಸುನಿಲ್ ಆಳ್ವ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಕೊಕ್ಕರಕಲ್ಲು ನ.ಪಂ ಸದಸ್ಯರಾದ ಸುಭಾಷ್ ಶೆಟ್ಟಿ, ಸತೀಶ್ ಅಂಚನ್,ವಂದನಾ ಕಾಮತ್, ದಯಾವತಿ ಅಂಚನ್, ರಾಧಿಕಾ ಕೋಟ್ಯಾನ್, ಬಿಜೆಪಿ ಮುಖಂಡರಾದ ಕಮಲಾಕ್ಷ ಬಡಗಹಿತ್ಲು, ಸತ್ಯೇಂದ್ರ ಶೆಣೈ,ಪುರುಷೋತ್ತಮ ರಾವ್, ವಿಠಲ್ ಎನ್.ಎಂ., ಹರಿಶ್ಚಂದ್ರ ಕೋಟ್ಯಾನ್, ವಿಶ್ವನಾಥ ಶೆಣೈ, ಅಶೋಕ ಜನನಿ, ಅಶೋಕ್ ಚಿತ್ರಾಪು, ರವಿ ಶೆಟ್ಟಿ ಉಪಸ್ಥಿತರಿದ್ದರು.

ರಸ್ತೆಗೆ ಉದಾರವಾಗಿ ಸ್ಥಳ ದಾನ ಮಾಡಿದ ದಿ. ಶೇಖರ ಕೋಟ್ಯಾನ್ ಅವರ ಪುತ್ರಿ ದಿವ್ಯಾ ಕೋಟ್ಯಾನ್ ಅವರನ್ನು ಈ ಸಂದರ್ಭ ಶಾಸಕರು ಗೌರವಿಸಿದರು.

ಕಮಲಾಕ್ಷ ಬಡಗುಹಿತ್ಲು ಸ್ವಾಗತಿಸಿ, ನಿರೂಪಿಸಿದರು.

Edited By : Vijay Kumar
Kshetra Samachara

Kshetra Samachara

23/10/2020 04:50 pm

Cinque Terre

4.1 K

Cinque Terre

0

ಸಂಬಂಧಿತ ಸುದ್ದಿ