ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀಪಾವಳಿ ಹಿನ್ನೆಲೆ: ತಾತ್ಕಾಲಿಕ ಪಟಾಕಿ ವ್ಯಾಪಾರ ಪರವಾನಿಗೆಗೆ ಅರ್ಜಿ ಆಹ್ವಾನ

ಮಂಗಳೂರು: ದೀಪಾವಳಿ ಹಬ್ಬದ ನಿಮಿತ್ತ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸುಡುಮದ್ದು ಮಾರಾಟ ಮಾಡಲು ಇಚ್ಚಿಸುವವರು ಪರವಾನಿಗೆಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಹಿದೆ.

ಅರ್ಜಿದಾರರಿಗೆ ಎಲ್‌ಇ-5ರಲ್ಲಿ ತಾತ್ಕಾಲಿಕವಾಗಿ ಸುಡುಮದ್ದು ವ್ಯಾಪಾರ ಮಾಡಲು ಪರವಾನಿಗೆ ನೀಡಲಾಗುವುದು. ಆಸಕ್ತರು ಅ.27ರ ಒಳಗೆ ಪೊಲೀಸ್ ಆಯುಕ್ತರ ಕಚೇರಿ, ಎ.ಬಿ. ಶೆಟ್ಟಿ ವೃತ್ತದ ಬಳಿ, ಮಂಗಳೂರು ನಗರ ಇವರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0824-2220803ನ್ನು ಸಂಪರ್ಕಿಸಲು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

19/10/2020 10:53 pm

Cinque Terre

4.23 K

Cinque Terre

0

ಸಂಬಂಧಿತ ಸುದ್ದಿ