ಕಾಸರಗೋಡು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮದ್ರಸ ಅಧ್ಯಾಪಕರೋರ್ವರು ಮೃತಪಟ್ಟ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಕುಂಬ್ಡಾಜೆಯಲ್ಲಿ ನಡೆದಿದೆ.
ಕುಂಬ್ಡಾಜೆ ಮವ್ವಾರಿನ ಮುಹಮ್ಮದ್ ಅಲಿ (44) ಮೃತರು. ಮುಹಮ್ಮದ್ ಅಲಿ ಅವರು ಶನಿವಾರ ಮಧ್ಯಾಹ್ನ ಬದಿಯಡ್ಕ ಪೇಟೆಯಿಂದ ಸಾಮಾಗ್ರಿ ಖರೀದಿಸಿ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ದನವೊಂದು ರಸ್ತೆಗೆ ಅಡ್ದವಾಗಿ ಬಂದ ಪರಿಣಾಮ ಬೈಕ್ ಮಗುಚಿ ಗಂಭೀರ ಗಾಯಗೊಂಡಿದ್ದರು. ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.
Kshetra Samachara
15/10/2020 08:15 pm