ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ಕೃಷಿಗೆ ಪೂರಕವಾಗಿ ನೇಜಿ ನೆಡುವ ಕಾರ್ಯಕ್ರಮ

ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ಆಶ್ರಯದಲ್ಲಿ ತೋಕೂರು ಗಣೇಶ್ ಅಮೀನ್ ರವರ ಗದ್ದೆಯಲ್ಲಿ, ನೇಜಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ನೇಜಿ ನೆಡುವ ಕಾರ್ಯದಲ್ಲಿ ಪಡುಪಣಂಬೂರು ಗ್ರಾ ಪಂ ಸದಸ್ಯರಾದ ಮೋಹನ್ ದಾಸ್, ಸಂತೋಷ್ ಕುಮಾರ್, ಸಂಸ್ಥೆಯ ಅಧ್ಯಕ್ಷ ಸಂತೋಷ್ ದೇವಾಡಿಗ, ಉಪಾಧ್ಯಕ್ಷ ದೀಪಕ್ ಸುವರ್ಣ,ಪ್ರಧಾನ ಕಾರ್ಯದರ್ಶಿ ಜಗದೀಶ್ ಕುಲಾಲ್*, ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನೇಜಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಸಂಸ್ಥೆಯ ಸದಸ್ಯರು, ಸದಸ್ಯೆಯರು ಮತ್ತು ಮಕ್ಕಳು ಭತ್ತದ ಬೇಸಾಯದಲ್ಲಿ ಪಾಲ್ಗೊಂಡು ಕೃಷಿಕರ ಬದುಕಿನ ಕಷ್ಟ-ಸುಖದ ಬಗ್ಗೆ ವೈಯಕ್ತಿಕ ಅನುಭವ ಗಳಿಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

09/08/2022 04:40 pm

Cinque Terre

1.35 K

Cinque Terre

0

ಸಂಬಂಧಿತ ಸುದ್ದಿ