ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್:ಹಸಿರು ಕ್ರಾಂತಿಗೆ ಕೈಜೋಡಿಸೋಣ

ಸುರತ್ಕಲ್:ನಿರಂತರವಾಗಿ ಪರಿಸರದ ಮೇಲಿನ ದೌರ್ಜನ್ಯದಿಂದಾಗಿ ಕಾಡು ಬರಿದಾಗಿ, ಕಾಂಕ್ರೀಟ್ ಕಾಡು ದಿನೇ ದಿನೇ ಬೆಳೆಯುತ್ತಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಲೇ ಇದೆ.ಇದೇ ರೀತಿ ಮುಂದುವರೆದರೆ ಮುಂದೆ ಹನಿ ಹನಿ ನೀರಿಗೂ ತತ್ವಾರ ಬರಬಹುದು. ಶುದ್ಧವಾದ ಆಮ್ಲಜನಕಯುಕ್ತ ಗಾಳಿಗಾಗಿ ಆಕ್ಸಿಜನ್ ಸಿಲಿಂಡರ್ ಬೆನ್ನ ಮೇಲೆ ನೇತಾಡಿಸಿಕೊಂಡು ಓಡಾಡುವ ಕಾಲ ಬರಬಹುದು.

ಈ ನಿಟ್ಟಿನಲ್ಲಿ ನಾವೆಲ್ಲರೂ ಈಗಲೇ ಎಚೆತ್ತುಕೊಂಡು ಗಿಡ ನೆಟ್ಟು ಪೋಷಿಸಿ, ಕಾಡು ಉಳಿಸಬೇಕು. ಪರಿಸರದ ಅಸಮತೋಲನವಾಗದಂತೆ ನೋಡಿಕೊಳ್ಳಬೇಕು. ಹಸಿರು ಕ್ರಾಂತಿಗೆ(ಗ್ರೀನ್ ರಿವಲ್ಯೂಷನ್ ) ಎಲ್ಲಾ ಗೃಹರಕ್ಷಕರು ಕಟಿಬದ್ಧರಾಗಬೇಕು. ಪ್ರತಿ ಗೃಹರಕ್ಷಕರು ವರ್ಷದಲ್ಲಿ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಬೆಳೆಸಿ ಪೋಷಿಸಬೇಕು. ಹಾಗಾದಲ್ಲಿ ಪರಿಸರದ ಸಮತೋಲನ ಉಂಟಾಗಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬಹುದು ಎಂದು ದ. ಕ ಜಿಲ್ಲಾ ಸಮಾದೇಷ್ಟರು ಮತ್ತು ದ. ಕ ಜಿಲ್ಲಾ ಪೌರರಕ್ಷಣಾ ವಿಭಾಗದ ಮುಖ್ಯಪಾಲಕರಾದ ಡಾ|| ಮುರಲೀ ಮೋಹನ್ ಚೂಂತಾರು ಹೇಳಿದರು.

ಅವರು ಸುರತ್ಕಲ್ ಗೃಹರಕ್ಷಕ ದಳದ ಕಚೇರಿಗೆ ಭೇಟಿ ನೀಡಿ ವಾರದ ಕವಾಯತನ್ನು ವೀಕ್ಷಿಸಿದರು ಮತ್ತು ವನಮಹೋತ್ಸವ ಆಚರಣೆಗೆ ಚಾಲನೆ ನೀಡಿದರು. ನೆರೆದಿದ್ದ ಎಲ್ಲಾ 35 ಗೃಹರಕ್ಷಕರಿಗೆ ಗಿಡ ನೀಡಿ, ಗಿಡ ನೆಟ್ಟು ಬೆಳೆಸುವಂತೆ ವಿನಂತಿ ಮಾಡಿದರು. ಸುರತ್ಕಲ್ ಘಟಕದ ಘಟಕಾಧಿಕಾರಿ ಶ್ರೀ ರಮೇಶ್ ಮತ್ತು ಸುಮಾರು 35 ಗೃಹರಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/07/2022 06:26 pm

Cinque Terre

1.27 K

Cinque Terre

0

ಸಂಬಂಧಿತ ಸುದ್ದಿ