ಮುಲ್ಕಿ: ಕಾರ್ನಾಡು ಶ್ರೀರಾಮ ಸೇವಾ ಮಂಡಳಿ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವನಮಹೋತ್ಸವ ಆಚರಿಸಲಾಯಿತು.
ವನಮಹೋತ್ಸವಕ್ಕೆ ಚಾಲನೆ ನೀಡಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಾಸುದೇವ ಬೆಳ್ಳೆ ಗಿಡಮರ ವಿಲ್ಲದೆ ಜೀವಿಸಲು ಅಸಾಧ್ಯವಾಗಿದ್ದು ಕಾಡುಗಳು ನಾಶವಾಗುತ್ತಿದೆ ಅವುಗಳ ರಕ್ಷಣೆ ಅಗತ್ಯ ಎಂದರು.
ಈ ಸಂದರ್ಭ ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷರಾದ ಭಾಸ್ಕರ ಶೆಟ್ಟಿಗಾರ್, ಸದಸ್ಯರಾದ ಸುನಿಲ್ ,ಕೇಶವ ಸುವರ್ಣ, ಮಾಧವ ಪೂಜಾರಿ, ಜೇಸಿ ಸಂಸ್ಥೆಯ ಅಧ್ಯಕ್ಷರಾದ ಕಲ್ಲಪ್ಪ ತಡವಲಗ, ವಿಶ್ವ ಹಿಂದೂ ಪರಿಷತ್ ನ ಕಾರ್ಯದರ್ಶಿ ಶ್ಯಾಮ್ ಸುಂದರ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
23/06/2022 03:30 pm