ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಡಲ ಕಿನಾರೆಯಲ್ಲಿ ಕಂಡು ಬಂದ ತೈಲ ಜಿಡ್ಡು ನೀರಿನ ಮಾದರಿ ತಪಾಸಣೆಗೆ ರವಾನೆ

ಮಂಗಳೂರು: ಸುರತ್ಕಲ್‌ನ ದೊಡ್ಡಕೊಪ್ಪಲು ಕಡಲ ಕಿನಾರೆಯಲ್ಲಿ ಕಂಡು ಬಂದಿರುವ ತೈಲ ಜಿಡ್ಡಿನ ಬಗ್ಗೆ ದ.ಕ.ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

ಇದೀಗ ಡಿಡಿಎಂಎ, ಎಂಆರ್​​ಪಿಎಲ್, ಎಂಇಝಡ್​ ಅಧಿಕಾರಿಗಳೊಂದಿಗೆ ಸ್ಥಳಕ್ಕೆ‌ ಭೇಟಿ‌ ನೀಡಿರುವ ಜಿಲ್ಲಾಧಿಕಾರಿ, ಕಡಲ ಕಿನಾರೆಯಲ್ಲಿ ಪತ್ತೆಯಾಗಿರುವ ತೈಲ ಜಿಡ್ಡು ನೀರಿನ ಮಾದರಿಯನ್ನು ಸಂಗ್ರಹಿಸಿ, ತಪಾಸಣೆಗಾಗಿ ಸಿಎಂಎಫ್ಆರ್​ಐಗೆ‌ ಕಳುಹಿಸಲಿದ್ದಾರೆ. ಪತ್ತೆಯಾಗಿರುವ ತ್ಯಾಜ್ಯದ ಪ್ರಾಥಮಿಕ ತನಿಖೆ‌ ನಡೆಸಲಾಗಿದ್ದು, ಅದು ಪಾಚಿಯಂತೆ ಕಂಡು ಬರುತ್ತಿದೆ. ಸಾಮಾನ್ಯ ಮಳೆಗಾಲ ಪ್ರಾರಂಭಕ್ಕಿಂತ ಮೊದಲು ಕಂಡು ಬರುವ ಪಾಚಿಯಂತೆ ಕಂಡು ಬರುತ್ತಿದೆ.

ಹೆಚ್ಚಿನ ಗಾಳಿ ಹಾಗೂ ಅಲೆಗಳ ಘರ್ಷಣೆಯಿಂದ ಕಡಲಿನ ತಳಭಾಗದಲ್ಲಿರುವ ಕೆಸರು ಮೇಲಕ್ಕೆ ಬರುವುದರಿಂದ ಈ ರೀತಿ ಕಾಣಿಸಿಕೊಳ್ಳುತ್ತದೆ. ಆದರೂ ತೈಲ ಮತ್ತು ಗ್ರೀಸ್ ತಪಾಸಣೆಗಾಗಿ ತೈಲ ಜಿಡ್ಡು ನೀರಿನ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ಮಾಹಿತಿ ನೀಡಿದ್ದಾರೆ.

Edited By :
Kshetra Samachara

Kshetra Samachara

15/05/2022 10:18 am

Cinque Terre

10.02 K

Cinque Terre

0

ಸಂಬಂಧಿತ ಸುದ್ದಿ