ಮಂಗಳೂರು ಹೊರವಲಯದ ಕಿನ್ಯ ಗ್ರಾಮದ ಉಕ್ಕುಡ ಮಸೀದಿಯ ಬಾವಿಗೆ ಬಿದ್ದ ಕಡವೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಣೆ ಮಾಡಿದ್ದಾರೆ.
ಕಿನ್ಯಾದಲ್ಲಿ ಆಕಸ್ಮಿಕವಾಗಿ ಕಡವೆ ಬಾವಿಗೆ ಬಿದ್ದು, ಜೀವ ರಕ್ಷಣೆಗಾಗಿ ಒದ್ದಾಡುತ್ತಿತ್ತು. ಇದನ್ನು ಸ್ಥಳೀಯರು ಗಮನಿಸಿ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಡವೆಯನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಬಾವಿಗೆ ಬಿದ್ದ ರಭಸಕ್ಕೆ ಕಡವೆಯ ಬೆನ್ನು ಹಾಗೂ ಕಾಲಿಗೆ ಗಾಯವಾಗಿದೆ. ಗಾಯಗೊಂಡ ಕಡವೆಯನ್ನು ಅರಣ್ಯ ಇಲಾಖೆ ಪಶುಚಿಕಿತ್ಸಾಲಯಕ್ಕೆ ತಂದು ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟಿದ್ದಾರೆ.
Kshetra Samachara
26/03/2022 02:15 pm