ಮಂಗಳೂರು: ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಮಳೆಯಾಗುತ್ತಿದೆ.
ಹಲವೆಡೆ ತಗ್ಗು ಪ್ರದೇಶಗಳು ಮುಳುಗಡೆಯಾಗಿದೆ. ಮಂಗಳೂರು ನಗರದ ಹೊರವಲಯದ ನೀರುಮಾರ್ಗ ಎಂಬಲ್ಲಿ ರಸ್ತೆ ಬಾಯ್ತೆರೆದರೆ, ಅದ್ಯಪಾಡಿಯಲ್ಲಿ ಗುಡ್ಡ ಕುಸಿತಗೊಂಡಿದೆ. ನೀರುಮಾರ್ಗದಲ್ಲಿ ಕಟಿಂಜಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿತವಾಗಿದೆ.
ಈ ರಸ್ತೆ ಸಂಪೂರ್ಣವಾಗಿ ಎರಡು ಭಾಗವಾಗಿದ್ದು, ಸಂಚಾರ ಸ್ಥಗಿತವಾಗಿದೆ, ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಅಳಪೆಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮನೆಯ ಕಂಪೌಂಡ್ ಗೋಡೆ ಕುಸಿದಿದ್ದು, ಗಾಯಗೊಂಡಿರುವ ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜಪೆ ಸಮೀಪದ ಅದ್ಯಪಾಡಿ ಸಮೀಪದಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ರಸ್ತೆಯ ಮೇಲೆ ಮಣ್ಣು ರಾಶಿ ಬಿದ್ದಿದೆ.
Kshetra Samachara
20/09/2020 04:44 pm