ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ತೋಕೂರು ಚಿಕ್ಕಟ್ರಾಯಪಾಡಿ ನಾರಾಯಣ ಹಗ್ವಿ ಕೋಟ್ಯಾನ್ ಸ್ಥಳದ ರಾಜ ಕಾಲುವೆಯ ಬಳಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟೆಗೆ ಕೃಷಿಕರ ಅನುಕೂಲಕ್ಕಾಗಿ ನೀರು ಉಳಿಸುವ ಉದ್ದೇಶದಿಂದ ಅಡ್ಡ ಹಲಗೆಗಳನ್ನು ಹಾಕಿ ನೀರು ಇಂಗಿಸುವ ಕಾರ್ಯದಲ್ಲಿ ಸಂಸ್ಥೆ ಸದಸ್ಯರು ಶ್ರಮದಾನ ಮಾಡಿದರು.
ಈ ಸಂದರ್ಭ ಸಂಸ್ಥೆ ಅಧ್ಯಕ್ಷ ಸಂತೋಷ್ ದೇವಾಡಿಗ, ಉಪಾಧ್ಯಕ್ಷ ದೀಪಕ್ ಸುವರ್ಣ, ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ, ಕೋಶಾಧಿಕಾರಿ ಸಂಪತ್ ದೇವಾಡಿಗ, ಪರಿಸರ ಸಂರಕ್ಷಣೆ ಕಾರ್ಯದರ್ಶಿ ಸುನಿಲ್ ದೇವಾಡಿಗ, ಆಂತರಿಕ ಲೆಕ್ಕ ಪರಿಶೋಧಕ ಸುಭಾಷ್, ಸಂಸ್ಥೆ ಸದಸ್ಯರು ಹಾಗೂ ನಿವೃತ್ತ ಯೋಧ ವಿಜಯ್ ಕುಮಾರ್, ಮಹೇಶ್ ಬೆಲ್ಚಡ, ಸಂತೋಷ್ ದೇವಾಡಿಗ, ಶ್ರೇಯಸ್ ದೇವಾಡಿಗ, ರಿಷಾಂಕ್, ಪ್ರಥಮ್ ಶ್ರಮದಾನದಲ್ಲಿ ಭಾಗವಹಿಸಿದರು.
Kshetra Samachara
28/12/2020 08:58 am