ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ತಾಲೂಕಿನ ಗಡಿ ಭಾಗವಾಗಿರುವ ಕರೋಪಾಡಿ ಗ್ರಾಮದ ಸಾರ್ಥಕೋಡಿ ಎಂಬಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ.
ಚಂದಪ್ಪ ಮೂಲ್ಯ ಮೃತಪಟ್ಟವರು.
ರಾತ್ರಿಯ ಬಳಿಕ ಗುಡುಗು ಸಿಡಿಲು ಇತ್ತು. ಈ ಸಂದರ್ಭ ಮನೆಗೆ ಸಿಡಿಲು ಬಡಿದಿದೆ, ಸುಮಾರು 12.30ರ ಬಳಿಕ ಘಟನೆ ನಡೆದಿದ್ದು, ಚಂದಪ್ಪ ಮೂಲ್ಯ ಅವರು ಸಿಡಿಲಾಘಾತದಿಂದ ತೀವ್ರ ಗಾಯಗೊಂಡಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇದೇ ಸಂದರ್ಭ ಮನೆಗೂ ಸಿಡಿಲಾಘಾತದಿಂದ ಹಾನಿಗಳುಂಟಾಗಿವೆ. ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ.
Kshetra Samachara
11/12/2020 11:44 am