ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಹೊಡೆದಾಟವೂ ಇಲ್ಲಿ ಒಂದು ಆರಾಧನೆ

ಸುಳ್ಯ: ಪರಸ್ಪರ ಹೊಡೆದಾಟವೂ ಇಲ್ಲಿ ಒಂದು ರೀತಿಯ ಆರಾಧನಾ ಕ್ರಮ. ಹೌದು ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಪರಿಸರದ ಜನ ಆಚರಿಸಿಕೊಂಡು ಬರುತ್ತಿರುವ ಒಂದು ವಿಶಿಷ್ಟ ರೀತಿಯ ಆಚರಣೆ. ಅಂದ ಹಾಗೆ ಈ ಆಚರಣೆ ರಕ್ತಪಾತಕ್ಕೋಸ್ಕರವಲ್ಲ, ನಾಡಿನಲ್ಲಿ ಸಂಘರ್ಷವನ್ನು ತಡೆಯುವ ಸದುದ್ದೇಶ ಈ ಆರಾಧನೆಯ ಮುಖ್ಯ ಉದ್ದೇಶ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೇಗೋಲು ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯು ಉಳ್ಳಾಕುಲು ದೈವದ ನೇಮೋತ್ಸವದ ಕಂಡುಬರುವ ಒಂದು ರೋಮಾಂಚಕ ದೃಶ್ಯವಿದೆ. ಹಿಂದೆ ಈ ಪ್ರದೇಶವನ್ನು ಬಳ್ಳಾಲರು ಆಳುತ್ತಿದ್ದ ಸಂದರ್ಭ ಇಲ್ಲಿನ ಅಣ್ಣ ತಮ್ಮಂದಿರಲ್ಲಿ ಜಾಗದ ವಿಷಯಕ್ಕೆ ಸಂಬಂಧಪಟ್ಟಂತೆ ವಿವಾದವು ಸಂಘರ್ಷದ ಘಟ್ಟಕ್ಕೆ ಬಂದು ಉಳ್ಳಾಲರು ದೇವರನ್ನು ಸಾಕ್ಷಿಯಾಗಿಟ್ಟು, ನ್ಯಾಯ ಧರ್ಮಕ್ಕೋಸ್ಕರ ಸಹೋದರರ ನಡುವೆ ಪಂಥಕ್ಕೋಸ್ಕರ ಯುದ್ಧ ನಡೆಸುತ್ತಾರೆ.

ಯುದ್ಧವು ಎಲ್ಲೆ ಮೀರಿ ರಕ್ತಪಾತವಾಗುವ ಸಂದರ್ಭ ಬಂದಾಗ ಸ್ವತಃ ದೈವವೇ ಬಂದು ಸಹೋದರರ ನಡುವಿನ ಯುದ್ಧವನ್ನು ತಡೆಯುತ್ತದೆ. ನಾಡಿನಲ್ಲಿ ಸಂಘರ್ಷವಾಗುವುದನ್ನು ತಡೆಯುವ ಉದ್ದೇಶದಿಂದ ಇದು ಆರಾಧನಾ ಪದ್ಧತಿಯಾಗಿ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದು ಅಡ್ಡನ ಹೊಡೆತ ಎನ್ನುವ ಮೂಲಕ ಪ್ರಸಿದ್ಧಿಯಾಗಿದೆ.

Edited By :
PublicNext

PublicNext

27/04/2022 04:58 pm

Cinque Terre

38.97 K

Cinque Terre

1

ಸಂಬಂಧಿತ ಸುದ್ದಿ