ಮುಲ್ಕಿ:ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ ಮಂಗಳೂರು ಹಾಗೂ ಭಾರತದ ಕಾನೂನು ನೆರವು ಘಟಕ ಹಳೆಯಂಗಡಿ ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ವತಿಯಿಂದ ಹಳೆಯಂಗಡಿಯಲ್ಲಿ ಕಾನೂನು ಮಾಹಿತಿ ಶಿಬಿರ ನಡೆಯಿತು.
ಸಿ.ಎಸ್.ಐ ಚರ್ಚ ಸಭಾ ಪಾಲಕ ರೆವೆ. ಐಸನ್ ಪಾಲನ್ನ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ “ಕಾನೂನು ಅರಿವು ಮೂಲಕ ಜನರ ಸಮಸ್ಯೆಗಳು ಪರಿಹಾರವಾಗಿ ದೇಶ ಅಭಿವೃದ್ಧಿಯಾಗುತ್ತದೆ, ಅಂತರಾಷ್ಟ್ರೀಯ ನ್ಯಾಯ ದಿನದಲ್ಲಿ ಕಾನೂನುಗಳ ಅರಿವು ಜನತೆಗೆ ಕಾನೂನುಗಳ ಜ್ಞಾನ ಬರುವಂತಾಗಲಿ” ಎಂದರು.
ಸಭೆಯ ಅಧ್ಯಕ್ಷತೆಯನ್ನು ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಅಧ್ಯಕ್ಷ ಡೇನಿಯಲ್ ದೇವರಾಜ್, ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಭಾ ಪಾಲಕ ರೆವೆ. ವಿನಯಲಾಲ್ ಬಂಗೇರರವರನ್ನು ಗೌರವಿಸಲಾಯಿತು.
ಮುಖ್ಯಅತಿಥಿಗಳಾಗಿ ಸಿ.ಎಸ್.ಐ ಚರ್ಚು ಕೃಷ್ಣಾಪುರದ ಸಭಾ ಪಾಲಕ ವಿಲಿಯಂ ಕುಂದರ್, ಸಿ.ಎಸ್.ಐ ಯುನಿಟಿ ಚರ್ಚ ನ ಸಭಾ ಪಾಲಕ ಸ್ಟೀವನ್ ಸರ್ವೋತ್ತಮ , ಪಾಸ್ಟರ್ ರಾಜೇಶ್ ಕೋಟ್ಯಾನ್, ಡೋನಾಲ್ಡ್ ಪ್ರಮೋದರ, ರಂಜನ್ ಜತ್ತನ್ನ, ಜಾರ್ಜು ಪಾಲನ್ನ, ಆಲ್ಫ್ರೆಡ್ ಪಾಲನ್ನ, ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ನ್ಯಾಯಾಂಗ ಇಲಾಖೆಯ ಶಿರಸ್ತೆದಾರ ಪ್ರಕಾಶ್ ನಾಯಕ್ ಕಾನೂನಿನ ಬಗ್ಗೆ ಮಾಹಿತಿ ನೀಡಿದರು.
ವಕೀಲ ಅಭಿಲಾಷ್ “ಹೆಣ್ಣು ಮಕ್ಕಳನ್ನು ಕೌಟುಂಬಿಕ ಹಿಂಸೆಯಿಂದ ಸಂರಕ್ಷಿಸುವ ಕಾನೂನುಗಳ” ಬಗ್ಗೆ ಮಾತನಾಡಿದರು
ಮೇರಿಸ್ವಪ್ನ ಸ್ವಾಗತಿಸಿದರು, ಪ್ರಸನ್ನಿ ಕಾರ್ಯಕ್ರಮ ನಿರೂಪಿಸಿದರು, ರೆವೆ. ವಿಲ್ಸನ್ ವಂದಿಸಿದರು.
Kshetra Samachara
23/07/2022 02:36 pm