ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಜಯಾನಂದ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ಖುಲಾಸೆ

ಮಂಗಳೂರು: ಜಯಾನಂದ ಅಲಿಯಾಸ್ ಜಯ ಎಂಬವರನ್ನು ನಗರದ ಸೆಂಟ್ರಲ್ ಮಾರ್ಕೆಟ್ ಬಳಿ‌ 2016ರಲ್ಲಿ ಹತ್ಯೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳನ್ನು ಆರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ರವೀಂದ್ರ ಸಾಲ್ಯಾನ್ ಅಲಿಯಾಸ್ ರವಿ ಮತ್ತು ನವೀನ್ ಖುಲಾಸೆಗೊಂಡಿರುವ ಆರೋಪಿಗಳು. ಮತ್ತೊಬ್ಬ ಆರೋಪಿ ರಘು ಎಂಬಾತ ತಲೆಮರೆಸಿಕೊಂಡಿದ್ದಾನೆ.

ಪ್ರಕರಣ ವಿವರ: 2016ರ ಫೆ. 28ರಂದು ಆರೋಪಿಗಳು ಜಯಾನಂದ ಅವರನ್ನು ಬಾರ್‌ಗೆ ಕರೆದುಕೊಂಡು ಹೋಗಿ ಮದ್ಯ ಕುಡಿಸಿ ಬಳಿಕ ಸೆಂಟ್ರಲ್ ಮಾರ್ಕೆಟ್ ನ ತರಕಾರಿ ಅಂಗಡಿ ಸಮೀಪ ಗಂಭೀರ ಹಲ್ಲೆ ನಡೆಸಿ ಚಿನ್ನದ ಸರ, ಹಣ ದೋಚಿದ್ದರು.

ಮರುದಿನ ತರಕಾರಿ ಅಂಗಡಿಯ ಕೆಲಸದಾತ ಬಂದು ಅಂಗಡಿಯ ಬಾಗಿಲು ತೆರೆದಾಗ ಪ್ರಕರಣ ಬಯಲಿಗೆ ಬಂದಿತ್ತು. ಪೊಲೀಸರು ಪ್ರಕರಣದ ತನಿಖೆ ನಡೆಸಿ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ಕೃತ್ಯದಲ್ಲಿ ಭಾಗವಹಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ನಗರ ಉತ್ತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನಾಪತ್ತೆಯಾಗಿರುವ ಆರೋಪಿ ರಘು ಎಂಬಾತನ ಪತ್ನಿಯ ಬಗ್ಗೆ ಜಯಾನಂದ ಕೆಟ್ಟದಾಗಿ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಆರೋಪಿಗಳು ಕೊಲೆ ಮಾಡಿದ್ದರು ಎಂದು ದೋಷಾರೋಪಣ ಪಟ್ಟಿಯಲ್ಲಿ ತಿಳಿಸಲಾಗಿತ್ತು.

ಪ್ರಕರಣವನ್ನು ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಧಾಕೃಷ್ಣ ಸುಮಾರು 21 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಆರೋಪಿ ಪರ ಮತ್ತು ಪ್ರಾಸಿಕ್ಯೂಷನ್ ಪರ ವಾದ ಆಲಿಸಿದರು. ಇಬ್ಬರು ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತೀರ್ಮಾನಿಸಿ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು.

Edited By : Vijay Kumar
Kshetra Samachara

Kshetra Samachara

09/02/2021 10:51 pm

Cinque Terre

8.07 K

Cinque Terre

0

ಸಂಬಂಧಿತ ಸುದ್ದಿ