ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಸಿದ ವ್ಯಕ್ತಿಯ ರಕ್ಷಣೆ

ನದಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೇ 21 ರಂದು ನಡೆದಿದ್ದು, ಆತನನ್ನ ಸಾರ್ವಜನಿಕರು ರಕ್ಷಿಸಿ ಕರೆ ತಂದಿದ್ದಾರೆ.

ಬೆಳ್ತಂಗಡಿ ತಾಲೂಕಿನ ತೆಕ್ಕಾರಿನ ರಫೀಕ್ (35) ಆತ್ಮಹತ್ಯೆ ಮಾಡಲೆತ್ನಿಸಿದ ವ್ಯಕ್ತಿ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈತ ಇಂದು ಉಪ್ಪಿನಂಗಡಿಯ ನೇತ್ರಾವತಿ ನದಿ ಸೇತುವೆಯಿಂದ ನದಿಗೆ ಧುಮಿಕಿದ್ದಾನೆ.

ಇದನ್ನು ಕಂಡ ಸಾರ್ವಜನಿಕರು ಈತನನ್ನು ರಕ್ಷಿಸಿ ದಡಕ್ಕೆ ಕರೆದುಕೊಂಡು ಬಂದು, ಪೊಲೀಸರಿಗೆ ಒಪ್ಪಿಸಿದ್ದಾರೆ. ನದಿಯಲ್ಲಿ ಅಲ್ಪ ನೀರಿದ್ದ ಕಾರಣ ಈತ ಸ್ವಲ್ಪ ದೂರವಷ್ಟೇ ಕೊಚ್ಚಿಕೊಂಡು ಹೋಗಿದ್ದ.

Edited By :
Kshetra Samachara

Kshetra Samachara

21/05/2022 03:11 pm

Cinque Terre

3.57 K

Cinque Terre

0

ಸಂಬಂಧಿತ ಸುದ್ದಿ