ನಿರ್ಬಂಧದ ಮಧ್ಯೆಯೇ ಇಂದು ಮತ್ತೆ ಕಾಲೇಜಿಗೆ ಆಗಮಿಸಿರುವ ಮಂಗಳೂರು ವಿವಿ ಕಾಲೇಜಿನ 16 ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶವನ್ನು ನಿರಾಕರಿಸಲಾಗಿದೆ.
ಮಂಗಳೂರು ವಿವಿ ಘಟಕದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 16 ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಹೋರಾಟ ನಡೆಸುತ್ತಿದ್ದರು. ಆದರೆ ಸಿಂಡಿಕೇಟ್ ಸಭೆಯ ನಿರ್ಧಾರದಂತೆ ಈ ವಿದ್ಯಾರ್ಥಿನಿಯರಿಗೆ ತರಗತಿಗೆ, ಲೈಬ್ರೆರಿಗೆ ಪ್ರವೇಶ ನಿರಾಕರಿಸಲಾಗಿತ್ತು. ನಿರ್ಬಂಧದ ನಡುವೆ ಇಂದು ಮತ್ತೆ ಈ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿದ್ದರು. ಆದರೆ ಪ್ರಾಂಶುಪಾಲೆ ಡಾ.ಅನಸೂಯ ರೈ ತರಗತಿಗೆ ಪ್ರವೇಶ ನಿರಾಕರಿಸಿದ್ದರು.
ತರಗತಿಗೆ ಪ್ರವೇಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಕಾಲೇಜು ಲೈಬ್ರರಿ ಬಳಿ ಕುಳಿತಿದ್ದಾರೆ. ಸೋಮವಾರ ದ.ಕ.ಜಿಲ್ಲಾಧಿಕಾರಿಯವರೊಂದಿಗೆ ಸಭೆ ನಡೆಸಿ ಕಾಲೇಜಿನತ್ತ ಸುಳಿಯದ ವಿದ್ಯಾರ್ಥಿನಿಯರು ಇಂದು ಮತ್ತೆ ಕಾಲೇಜಿಗೆ ಹಾಜರಾಗಿದ್ದರು. ಆದರೆ ತರಗತಿಗೆ ಪ್ರವೇಶ ನಿರಾಕರಣೆಯ ಹಿನ್ನೆಲೆಯಲ್ಲಿ ಅವರು ಹೊರಗುಳಿದು ಗ್ರಂಥಾಲಯದ ಬಳಿ ಕುಳಿತಿದ್ದಾರೆ. ಒಟ್ಟಿನಲ್ಲಿ ಈ ವಿವಾದ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕಾದು ನೋಡಬೇಕಿದೆ.
Kshetra Samachara
02/06/2022 03:12 pm