ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಬಿ.ಸಿ.ರೋಡ್ ನಲ್ಲಿ ಸರಕಾರಗಳ ಸುಗ್ರೀವಾಜ್ಞೆ ವಿರೋಧಿಸಿ ಸಿಪಿಐ ಪ್ರತಿಭಟನೆ

ಬಂಟ್ವಾಳ: ಕರ್ನಾಟಕ ಭೂ ಸುಧಾರಣ ತಿದ್ದುಪಡಿ ಸುಗ್ರೀವಾಜ್ಞೆ, ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆ, ಕೈಗಾರಿಕೆ ವ್ಯಾಜ್ಯ ಮತ್ತು ಇತರ ಕಾರ್ಮಿಕ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಜಾರಿ ಮಾಡದಂತೆ ಒತ್ತಾಯಿಸಿ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗ ಶನಿವಾರ ಪ್ರತಿಭಟನೆ ನಡೆಯಿತು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ, ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಸುಗ್ರೀವಾಜ್ಞೆಗಳು ರಾಜ್ಯದ ರೈತಾಪಿ ಹಾಗೂ ಕಾರ್ಮಿಕ, ಜನಸಮೂಹಗಳ ಮೇಲೆ ಅತ್ಯಂತ ಗಂಭೀರ ದುಷ್ಪರಿಣಾಮ ಉಂಟು ಮಾಡಬಲ್ಲಂತಹ ಸುಗ್ರೀವಾಜ್ಞೆಯಾಗಿದೆ. ಈ ಸುಗ್ರೀವಾಜ್ಞೆ ಆರ್ಥಿಕ ಅಸಮಾನತೆ ತೀವ್ರಗೊಳಿಸುವುದಲ್ಲದೆ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ವಿವಿಧ ಸಾಮಾಜಿಕ ಜನಸಮೂಹಗಳನ್ನು ಮತ್ತಷ್ಟು ದಮನಕ್ಕೀಡು ಮಾಡುವಂತಹ, ಸಾಮಾಜಿಕ ಅಸಮಾನತೆ ಮತ್ತಷ್ಟು ಹೆಚ್ಚಿಸಲು ಕಾರಣವಾಗುತ್ತದೆ ಎಂದು ಆರೋಪಿಸಿದರು.

ಜಿಲ್ಲಾ ಸಹಕಾರ್ಯದರ್ಶಿ ಬಿ. ಶೇಖರ್ ಮಾತನಾಡಿದರು. ಸಂಘಟನೆ ಪ್ರಮುಖರಾದ ಎಚ್. ವಿ. ರಾವ್, ಶ್ರೀನಿವಾಸ ಭಂಡಾರಿ, ಪ್ರೇಮನಾಥ ಕೆ., ಭರತ್ ಪ್ರಶಾಂತ್, ಆರ್.ಡಿ. ಸೋನ್ಸ್, ಸರಸ್ವತಿ ಕಡೇ ಶಿವಾಲಯ, ರತಿ ಎಸ್., ಬಾಬು ಭಂಡಾರಿ, ದಿನೇಶ್ ಮಂಗಳೂರು, ಹರ್ಷಿತ್, ಕೇಶವತಿ, ಕುಸುಮ, ದೀಪಕ್ ಮಂಗಳೂರು, ಸುಧಾಕರ ಕಲ್ಲೂರು ಉಪಸ್ಥಿತರಿದ್ದರು. ಸುರೇಶ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಪ್ರೇಮನಾಥ್ ಕೆ. ವಂದಿಸಿದರು.

Edited By : Vijay Kumar
Kshetra Samachara

Kshetra Samachara

19/09/2020 06:07 pm

Cinque Terre

4.99 K

Cinque Terre

0

ಸಂಬಂಧಿತ ಸುದ್ದಿ