ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಐಕಳ ಪೊಂಪೈ ಕಾಲೇಜಿನಲ್ಲಿ ಉದ್ಯಮಶೀಲತೆ ಮಾಹಿತಿ

ಮುಲ್ಕಿ: ಸ್ವಉದ್ಯೋಗ ಕ್ಷೇತ್ರದಲ್ಲಿ ಇರುವ ವಿಪುಲ ಅವಕಾಶಗಳು ಮತ್ತು ಅವುಗಳಿಗೆ ಪೂರಕವಾಗಿ ನೀಡಲಾಗುವ ತರಬೇತಿಯನ್ನು ಪಡೆದು ಸ್ವಉದ್ಯೋಗದಲ್ಲಿ ತೊಡಗಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಪ್ರಯತ್ನಿಸಬೇಕೆಂದು ಉಜಿರೆಯ ಗ್ರಾಮಾಭಿವೃದ್ದಿ ಮತ್ತು ಸ್ವಉದ್ಯೋಗ ತರಬೇತಿ ಸಂಸ್ಥೆ (ರುಡ್ ಸೆಟ್) ತರಬೇತುದಾರ ಅಬ್ರಾಹಂ ಜೇಮ್ಸ್ ಪಿ.ವಿ. ಹೇಳಿದರು.

ಐಕಳದ ಪೊಂಪೈ ಕಾಲೇಜಿನ ವೃತ್ತಿ ಮಾರ್ಗದರ್ಶನ ಕೋಶ ಮತ್ತು ವಾಣಿಜ್ಯ ಶಾಸ್ತ್ರ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಜರುಗಿದ ಸ್ವಉದ್ಯೋಗದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಕೆ.ವಿ. ವಹಿಸಿದ್ದರು. ವಾಣಿಜ್ಯ ಶಾಸ್ತ್ರ ಸಂಘದ ಸಂಯೋಜಕ ಪ್ರೊ.ರಿಚರ್ಡ್‌ ಆರ್. ಸಿಕ್ವೇರ, ಅಧ್ಯಾಪಕರಾದ ರಜನಿ ಜೆನಿಟಾ, ಅನಿತಾ ಕುಟಿನ್ಹಾ, ಸಿಲ್ವಿಯಾ ಪಾಯ್ಸ್ ಮತ್ತು ವಿನಯ್ ಎ. ಸಿಕ್ವೇರ ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗುಣಕರ್‌ ಎಸ್. ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಸಂಘದ ಸಂಯೋಜಕರಾದ ಅಂತಿಮ ಬಿ.ಕಾಂ ತರಗತಿಯ ಅಕ್ಷತಾ ನಿರೂಪಿಸಿದರು. ಧನ್ಯಶ್ರೀ ವಂದಿಸಿದರು.

Edited By : Nirmala Aralikatti
Kshetra Samachara

Kshetra Samachara

15/02/2021 11:47 am

Cinque Terre

6.51 K

Cinque Terre

0

ಸಂಬಂಧಿತ ಸುದ್ದಿ