ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಬಡಕುಟುಂಬಕ್ಕೆ ಹೊಸ ಮನೆ ನಿರ್ಮಾಣ; ಐಕಳ ಹರೀಶ್ ಶೆಟ್ಟಿ ಶಿಲಾನ್ಯಾಸ

ಮುಲ್ಕಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಸತಿ ಯೋಜನೆಯ ಅಡಿಯಲ್ಲಿ ಕಟೀಲು ಮಲ್ಲಿಗೆ ಅಂಗಡಿ ಸಮೀಪದ ಕೊಂಡೆಮೂಲೆ ಎಂಬಲ್ಲಿ ತೀರಾ ಬಡಕುಟುಂಬದ ಸುಂದರಿ ಶೆಟ್ಟಿ ಎಂಬವರಿಗೆ ಒಕ್ಕೂಟದ ವತಿಯಿಂದ ನೂತನ ಮನೆ ನಿರ್ಮಾಣ ಮಾಡುವುದಕ್ಕೆ ಶಿಲಾನ್ಯಾಸವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ನೆರವೇರಿಸಿದರು.

ಬಳಿಕ ಅವರು ಮಾತನಾಡಿ, ಒಕ್ಕೂಟದ ಅಧ್ಯಕ್ಷರು ಕಟೀಲು ತಾಯಿಯ ಆಶೀರ್ವಾದದಿಂದ ಮುಂಬೈನ ಮಹಾದಾನಿಗಳ ಕೊಡುಗೆಯ ಮೂಲಕ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡುವಂಥ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು. ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಒಕ್ಕೂಟದಿಂದ ನಾವು ಮಾಡುವ ಕೆಲಸವು ಸಮಾಜಕ್ಕೆ ಮಾದರಿ ಎಂದರು.

Edited By : Nagaraj Tulugeri
Kshetra Samachara

Kshetra Samachara

21/01/2021 05:31 pm

Cinque Terre

6.18 K

Cinque Terre

0

ಸಂಬಂಧಿತ ಸುದ್ದಿ