ಮೂಡುಬಿದಿರೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯಿದೆ ವಿರುದ್ಧ ಜ. 26ರಂದು ಮಂಗಳೂರಿನಲ್ಲಿ ರೈತರ ಗಣರಾಜ್ಯೋತ್ಸವ ಪರೇಡ್ ನಡೆಯಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ ತಿಳಿಸಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ಇಲ್ಲಿನ ಮೂಡುಬಿದಿರೆ ಕಚೇರಿ ಎದುರು ಶುಕ್ರವಾರ ರೈತ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಸಭೆಯಲ್ಲಿ ಅವರು ಮಾತನಾಡಿದರು.
ದೆಹಲಿಯಲ್ಲಿ ರೈತರ ಹೋರಾಟ ತೀವ್ರಗೊಂಡಿದ್ದು, ಹಲವು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ರೈತರು ಧೃತಿಗೆಡದೆ ಹೋರಾಟ ಮುಂದುವರಿಸಿದ್ದಾರೆ. ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಸರ್ಕಾರದ ವತಿಯಿಂದ ಪರೇಡ್ ನಡೆದ ಬಳಿಕ ರೈತ ಸಂಘಟನೆಗಳಿಂದ ಪರೇಡ್ ನಡೆಯಲಿದೆ.
ಇದಕ್ಕೆ ಬೆಂಬಲವಾಗಿ ಮಂಗಳೂರಿನಲ್ಲೂ ರೈತ ಸಂಘಟನೆಗಳು, ವಿವಿಧ ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಾಹಿತಿಗಳನ್ನೊಳಗೊಂಡ ಗಣರಾಜ್ಯೋತ್ಸವ ಪರೇಡ್ ಜರುಗಲಿದೆ ಎಂದರು.
ಮೂಡುಬಿದಿರೆ ಪ್ರಾಂತ ರೈತ ಸಂಘದ ಅಧ್ಯಕ್ಷ ಸುಂದರ ಶೆಟ್ಟಿ, ಸಿಐಟಿಯು ಕಾರ್ಯದರ್ಶಿ ರಾಧಾ, ಬಿಸಿಯೂಟ ಸಂಘದ ಜಿಲ್ಲಾ ಕಾರ್ಯದರ್ಶಿ ಗಿರಿಜಾ, ಕಟ್ಟಡ ಕಾರ್ಮಿಕ ಸಂಘದ ಮುಖಂಡ ಶಂಕರ್ ವಾಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/01/2021 02:40 pm