ಮೂಡುಬಿದಿರೆ: ವಿವಿಧ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕರಾವಳಿಯ ನಲಿಕೆ , ಪರವ ಸಮುದಾಯಗಳ ಕಲಾವಿದರ ಸಮೀಕ್ಷೆಯನ್ನು ಮೂಡುಬಿದಿರೆ ತಾಲೂಕು ನಲಿಕೆಯವರ ಸಂಘದ ವತಿಯಿಂದ ನಡೆಸಲಾಗಿದೆ.
ಇನ್ನೂರು ಮಂದಿ ದೈವಾರಾಧನೆ ಕಲಾವಿದರ ಪಟ್ಟಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಅವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ನಲಿಕೆಯವರ ಸಂಘದ ಅಧ್ಯಕ್ಷ ಎನ್. ಕೆ. ಸಾಲ್ಯಾನ್ ಮಾರೂರು, ತಾಲೂಕು ಯುವ ಘಟಕದ ಕೋಶಾಧಿಕಾರಿ ದಿನೇಶ್ ಪಿ. ಇರುವೈಲು ಪದವು, ಮೂಡಬಿದಿರೆ ತಾಲೂಕು ಸಂಘದ ಪ್ರಮುಖರಾದ ಚೆನ್ನ ವಾಲ್ಪಾಡಿ , ಪದ್ಮನಾಭ ವಾಲ್ಪಾಡಿ ಉಪಸ್ಥಿತರಿದ್ದರು.
Kshetra Samachara
08/01/2021 02:30 pm