ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಮಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

ಮಂಗಳೂರು: 33/11 ಕೆವಿ ಪಣಂಬೂರು ಉಪಕೇಂದ್ರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಈ ಹಿನ್ನೆಲೆಯಲ್ಲಿ ಮೇ 7ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಕುದ್ರು, ಕಸಬ ಬೆಂಗ್ರೆ, ಕುದ್ರೋಳಿ ಬೆಂಗ್ರೆ, ತೋಟ ಬೆಂಗ್ರೆ, ಬೊಕ್ಕಪಟ್ಣ ಬೆಂಗ್ರೆ, ತಣ್ಣೀರುಬಾವಿ, ಕೂಳೂರು ಜಂಕ್ಷನ್, ಪಣಂಬೂರು, ಮೀನಕಳಿಯ, ನಂದನೇಶ್ವರ ದೇವಸ್ಥಾನ, ಚಿತ್ರಾಪುರ, ಹೊಸಬೆಟ್ಟು, ಹೊನ್ನಕಟ್ಟೆ ಜಂಕ್ಷನ್, ಆಚಾರ್ಯ ಕಾಲನಿ, ತಾವರೆಕೊಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುತ್ತದೆ.

ಕುಲಶೇಖರ: 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಎಕ್ಕೂರು ಫೀಡರ್ ಹಾಗೂ 11ಕೆವಿ ಪಂಪ್ ವೆಲ್ ಫೀಡರ್ ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 7ರಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ಉಜ್ಜೋಡಿ, ನೆಕ್ಕರೆಮಾರ್, ಗೋರಿಗುಡ್ಡ, ಎಕ್ಕೂರು, ನೇತ್ರಾವತಿ ಗ್ಯಾರೇಜ್, ಕಡೇಕಾರ್, ಜಪ್ಪಿನಮೊಗರು, ತಾರೆದೊಲ್ಯ, ತಂದೊಳಿಗೆ, ಡೆನ್ಮಾರ್ಕ್ ಲೇಔಟ್, ವಾಸುಕಿ ನಗರ, ಅಳಕೆ ಮಠ, ಪರಂಜ್ಯೋತಿ ಭಜನಾ ಮಂದಿರ, ಕನಕರಬೆಟ್ಟು, ರಾಮ್ತೋಟ, ಕುಡುಪ್ಪಾಡಿ ತೋಟ, ಸದಾಶಿವ ನಗರ, ಪಡೀಲ್ ಜಂಕ್ಷನ್, ಕಂಕನಾಡಿ ರೈಲ್ವೇ ಸ್ಟೇಷನ್, ನಾಗುರಿ, ಗರೋಡಿ, ಬಲಿತಮಾರ್, ಮಹಾಲಿಂಗೇಶ್ವರ ದೇವಸ್ಥಾನ, ನೇತ್ರಾವತಿ ಲೇಔಟ್, ಪಂಪ್ ವೆಲ್, ಪ್ರಶಾಂತ್‍ಬಾಗ್ ಗ್ಯಾಸ್ ಗೋಡೌನ್, ಸೈಮನ್ ಲೇನ್, ಮೇಘನಗರ, ಗುಡ್ಡೆತೋಟ, ರೆಡ್ ಬಿಲ್ಡಿಂಗ್, ಕೆಂಬಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Edited By : Nagaraj Tulugeri
Kshetra Samachara

Kshetra Samachara

06/05/2022 12:33 pm

Cinque Terre

3.44 K

Cinque Terre

0

ಸಂಬಂಧಿತ ಸುದ್ದಿ