ಮಂಗಳೂರು: ಮಂಗಳೂರು ಸೆಂಟ್ರಲ್ ಮತ್ತು ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ಗಳ ನಡುವೆ ಸೆ.27ರಿಂದ ಪ್ರತಿನಿತ್ಯ ವಿಶೇಷ ರೈಲು ಸಂಚರಿಸಲಿದೆ.
ಸೆ.27ರಿಂದ ಮಂಗಳೂರು ಸೆಂಟ್ರಲ್ ನಿಂದ ವಿಶೇಷ ರೈಲು ಓಡಾಟ ಆರಂಭವಾಗಲಿದ್ದು, (ಟ್ರೈನ್ ನಂಬರ್ : 02602) ಮಧ್ಯಾಹ್ನ 1.30ಕ್ಕೆ ಹೊರಡಲಿದ್ದು, ಮಾರನೇ ದಿನ ಬೆಳಗ್ಗೆ 5.35ಕ್ಕೆ ಚೆನ್ನೈ ಸೆಂಟ್ರಲ್ ಗೆ ಬರಲಿದೆ.
ಚೈನ್ನೈ ಸೆಂಟ್ರಲ್ ನಿಂದ ರಾತ್ರಿ 8.10ಕ್ಕೆ ಹೊರಡಲಿದ್ದು, (ಟ್ರೈನ್ ನಂ. 02601) ಮಾರನೇ ದಿನ ಮಧ್ಯಾಹ್ನ 12.10ಕ್ಕೆ ಮಂಗಳೂರು ನಿಲ್ದಾಣಕ್ಕೆ ಬರಲಿದೆ.
ಈ ರೈಲಿಗೆ ಮಂಜೇಶ್ವರ, ಕಾಸರಗೋಡು, ಕಾಂಞಗಾಡ್, ಚೆರ್ವತ್ತೂರು, ಪಯ್ಯನ್ನೂರು, ಪಯಂಗಡಿ ಕಣ್ಣೂರು, ಮಾಹೆ, ತಲಶ್ಶೇರಿ, ವಡಕ್ಕರ, ಕಟ್ಪಾಡಿ ಜಂಕ್ಷನ್, ತಿರುವಲ್ಲೂರು, ಪೆರಂಬೂರು ನಿಲ್ದಾಣಗಳಲ್ಲಿ ನಿಲುಗಡೆಯಿದೆ.
Kshetra Samachara
25/09/2020 04:25 pm