ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಳ

ಬಂಟ್ವಾಳ: ಸೋಮವಾರ ಮಧ್ಯರಾತ್ರಿಯಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಜಾರಿಯಾದುದರ ಪರಿಣಾಮ ಬ್ರಹ್ಮರಕೂಟ್ಲು ಟೋಲ್ ಬೂತ್ ನಲ್ಲಿ ಮಂಗಳೂರಿನಿಂದ ಬರುವ ವಾಹನಗಳ ಸರತಿ ಸಾಲು ಜಾಸ್ತಿ ಆಗಿದೆ.

ಫಾಸ್ಟ್ ಟ್ಯಾಗ್ ಕಡ್ಡಾಯ ಇಲ್ಲದೇ ಇದ್ದಾಗಲೂ ಈ ಭಾಗದಲ್ಲಿ ಸಾಲು ಕಡಿಮೆ ಏನೂ ಇರಲಿಲ್ಲ. ಈಗ ಇನ್ನಷ್ಟು ಜಾಸ್ತಿಯಾಗಿದೆ.

ಸರ್ವೀಸ್ ರಸ್ತೆಯಲ್ಲಿ ದ್ವಿಚಕ್ರ, ಆಟೋ ವಾಹನಗಳ ಸಂಚಾರಕ್ಕೂ ಕಷ್ಟವಾಗುವ ಕಾರಣ ಟೋಲ್ ಕಟ್ಟುವ ವಾಹನಗಳ ಜತೆಗೆ ಇತರ ವಾಹನಗಳೂ ಹೆದ್ದಾರಿಯಲ್ಲೇ ಸಂಚರಿಸಬೇಕಾದ ಕಾರಣ ಮತ್ತೂ ಸಮಸ್ಯೆಯಾಗಿದೆ.

ಬ್ರಹ್ಮರಕೂಟ್ಲುವಿಗೆ ರಾಮಲ್ ಕಟ್ಟೆಯಿಂದ ಸಾಗುವ ಸರ್ವೀಸ್ ರಸ್ತೆ (ಹಿಂದೆ ಅದೇ ಹೆದ್ದಾರಿ ಆಗಿತ್ತು)ಯ ರಿಪೇರಿ ಕಾರ್ಯ ನಡೆಯುತ್ತಿರುವ ಕಾರಣ ಅಲ್ಲಿ ಸಮಸ್ಯೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ವಾಹನಗಳೂ ಇಕ್ಕಟ್ಟಿನ ಟೋಲ್ ಗೇಟ್ ಬಳಿ ಸಾಲುಗಟ್ಟಿ ನಿಲ್ಲಬೇಕು. ಫಾಸ್ಟ್ ಟ್ಯಾಗ್ ನ ಉದ್ದೇಶ ಟೋಲ್ ಸಂಗ್ರಹದ ವೇಳೆ ಸಮಯ ವ್ಯರ್ಥ ವಾಗಬಾರದು ಎಂದು. ಆದರೆ, ಇಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಒಂದೆಡೆ ಟೋಲ್ ಗಳನ್ನೇ ತೆಗೆಯುವ ಕುರಿತು ಮಾತು ಕೇಳಿಬರುತ್ತಿದ್ದರೆ, ಅಗಲ ಕಿರಿದಾದ ಜಾಗದಲ್ಲಿ ಸ್ಥಾಪನೆಗೊಂಡ ಬ್ರಹ್ಮರಕೂಟ್ಲು ಟೋಲ್ ಮುಂದೆ ವಾಹನಗಳು ದುಬಾರಿ ಇಂಧನವನ್ನು ಅನಗತ್ಯವಾಗಿ ವ್ಯಯ ಮಾಡುವಂತಾಗಿದೆ.

Edited By : Vijay Kumar
Kshetra Samachara

Kshetra Samachara

17/02/2021 12:48 pm

Cinque Terre

11.09 K

Cinque Terre

0

ಸಂಬಂಧಿತ ಸುದ್ದಿ