ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ನ.22ರಂದು ರಾಜಕೇಸರಿಯಿಂದ `ಆಸರೆ' ಮನೆ ಹಸ್ತಾಂತರ

ಮೂಡುಬಿದಿರೆ: ದಿನಕೂಲಿ ಕಾರ್ಮಿಕರ ಸಂಘಟನೆಯಾಗಿರುವ ಅಖಿಲ ಕರ್ನಾಟಕ ರಾಜಕೇಸರಿ ಬೆಳ್ತಂಗಡಿ ಇದರ ರಾಜಕೇಸರಿ ಮೂಡುಬಿದಿರೆ ತಾಲೂಕು ಘಟಕದ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ `ಆಸರೆ' ಮನೆಯನ್ನು ನ.22ರಂದು ಹಸ್ತಾಂತರಿಸಲಾಗುವುದು ಎಂದು ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದರೆಗುಡ್ಡೆ ಕೆಲ್ಲಪುತ್ತಿಗೆ ವೀರಮಾರುತಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಬೆಂಗಳೂರು ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಸಂಘಟನೆಯ ಮೂಡುಬಿದಿರೆ ತಾಲೂಕು ಅಧ್ಯಕ್ಷ ಕಿಶೋರ್ ಅಧ್ಯಕ್ಷತೆವಹಿಸಲಿದ್ದು, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ ಜಯಂತ್ ನಡುಬÉೈಲು, ರಾಜಕೇಸರಿ ಸಂಘಟನೆಯ ಜಿಲ್ಲಾಧ್ಯಕ್ಷ ಅಶೋಕ್ ಎಸ್. ಮಾಲೆಮಾರ್, ಕಾರ್ಕಳ ತಾ. ಆಧ್ಯಕ್ಷ ಸಂಪತ್ ಭಂಡಾರಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಕಾರ್ತಿಕ್ , ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ., ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉದ್ಯಮಿ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಗಣ್ಯರಾದ ಮಹೇಶ್ ಛಬ್ಬಿ ಶಿರಹಟ್ಟಿ, ಪ್ರವೀಣ್ ನೆಟ್ಟಾರು, ವೇಣುಗೋಪಾಲ್, ಅಶ್ರಫ್ ಆಲಿಕುಂಞÂ, ಸತೀಶ್ ಮಾಚನಹಳ್ಳಿ, ಕುಮಾರ್ ಪೂಜಾರಿ, ಸುಮಿತ್ ದರೆಗುಡ್ಡೆ, ಜಯಕುಮಾರ್ ಶೆಟ್ಟಿ, ದೇವದಾಸ್ ಸಾಲ್ಯಾನ್, ಸುರೇಶ್ ಕಟೀಲು ಭಾಗವಹಿಸಲಿರುವರು.

ಸಂಘಟನೆಯ 382ನೇ ಯೋಜನೆಯ 32ನೇ ಮನೆ ಇದಾಗಿದೆ. ಕೂಲಿ ಕಾರ್ಮಿಕರೇ ಸದಸ್ಯರಾಗಿರುವ ಸಂಘಟನೆಯು ಆರ್ಥಿಕವಾಗಿ ಅಶಕ್ತರಾದವರಿಗೆ ವಸತಿ, ಆರೋಗ್ಯ, ಶಿಕ್ಷಣ ಮತ್ತಿತರ ವಿಷಯಗಳಲ್ಲಿ ನೆರವಾಗುತ್ತ ಬಂದಿದೆ. 31 ಮನೆಗಳನ್ನು ತಲಾ ರೂ. 1.8 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಯಜಮಾನದ ಅನಾರೋಗ್ಯದಿಂದಾಗಿ ಅರ್ಧಕ್ಕೇ ನಿಂತು ಹೋಗಿದ್ದ ಮನೆಯನ್ನು ರೂ. 1.4 ಲಕ್ಷ ವೆಚ್ಚದಲ್ಲಿ ಶೀಟ್ ಹೊದೆಸಿದ ಮನೆಯನ್ನಾಗಿ ರೂಪಿಸಲಾಗಿದೆ.

ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಕ್ರೀಡಾರತ್ನ ಪುರಸ್ಕøತ ಪ್ರವೀಣ್ ಕೋಟ್ಯಾನ್ ಪಣಪಿಲ (ಕಂಬಳ) ಕೊರಗಜ್ಜನ ಗಾನ ಖ್ಯಾತಿಯ ಕಾರ್ತಿಕ್ ಅವರನ್ನು ಸಮ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.

ರಾಜಕೇಸರಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಕಾರ್ತಿಕ್, ಮೂಡುಬಿದಿರೆ ತಾಲೂಕು ಅಧ್ಯಕ್ಷ ಕಿಶೋರ್, ರಾಮಸೇನೆ ತಾಲೂಕು ಅಧ್ಯಕ್ಷ ಅಶೋಕ ಆಳ್ವ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

21/11/2020 11:04 am

Cinque Terre

5.11 K

Cinque Terre

0

ಸಂಬಂಧಿತ ಸುದ್ದಿ