ಮಂಗಳೂರು: ಗ್ರಾಮೀಣ ಭಾಗದ ಜನರು ಪಾನ್ ಕಾರ್ಡ್, ಚಾಲನಾ ಪರವಾನಿಗೆ, ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಲು ಆಯ್ದ ಅಂಚೆ ಕಚೇರಿಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್ ಆರಂಭಿಸಲಾಗಿದೆ ಎಂದು ಮಂಗಳೂರು ಪ್ರಧಾನ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,
ಮಂಗಳೂರು ಅಂಚೆ ವಿಭಾಗಕ್ಕೊಳಪಡುವ 27 ಅಂಚೆ ಕಚೇರಿಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್‌ಗಳನ್ನು ತೆರೆಯಲಾಗಿದೆ.
ಮಂಗಳೂರಿನ ಪ್ರಧಾನ ಅಂಚೆ ಕಚೇರಿ, ಕುಲಶೇಖರ ಪ್ರಧಾನ ಅಂಚೆ ಕಚೇರಿ, ಹಂಪನಕಚ್ಟೆ, ಕೊಡಿಯಾಲ್ ಬೈಲ್, ಕಂಕನಾಡಿ, ಅಶೋಕ ನಗರ, ಬಿಜೈ, ಬಲ್ಮಠ, ಸುರತ್ಕಲ್, ಮುಲ್ಕಿ, ಬಜ್ಪೆ, ಪಣಂಬೂರು, ಕೊಂಚಾಡಿ, ಕಿನ್ನಿಗೋಳಿ, ಕಾಟಿಪಳ್ಳ, ಮಂಗಳ ಗಂಗೋತ್ರಿ, ಕಿನ್ನಿಕಂಬ್ಳ, ಗಂಜಿಮಠ, ಹಳೆಯಂಗಡಿ, ಬೆಳ್ಮಣ್, ಮುಂಡ್ಕೂರು, ಕಾವೂರು, ಕೂಳೂರು, ಕುಳಾಯಿ, ಪಡೀಲ್, ವಾಮಂಜೂರು ಮತ್ತು ಉಳ್ಳಾಲ ಅಂಚೆ ಕಚೇರಿಗಳಲ್ಲಿ ಸರ್ವಿಸ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ.
ಸಾರ್ವಜನಿಕರು ಕೇವಲ 107 ರೂ., ಗುರುತಿನ ಚೀಟಿ, ಜನ್ಮ ದಿನಾಂಕ, ವಿಳಾಸ ಪುರಾವೆಗಳನ್ನು ಪಾವತಿಸಿ ಪಾನ್ ಕಾರ್ಡ್ ಪಡೆಯಬಹುದು. ಪಾರ್ಸ್‌ಪೋರ್ಟ್ ಪ್ರಾಧಿಕಾರವು ನಿಗದಿಪಡಿಸಿದ ಪಾಸ್‌ಪೋರ್ಟ್ ಶುಲ್ಕ (1500 ರೂ.) ಹಾಗೂ 100 ರೂ. ಸೇವಾ ಶುಲ್ಕವನ್ನು ಪಾವತಿಸಿ ಮುಂಗಡ ಅಪಾಯಿಂಟ್‌ಮೆಂಟ್ ಪಡೆದು ಪಾಸ್‌ಪೋರ್ಟ್ ಮಾಡಿಸಿ ಕೊಳ್ಳಬಹುದು ಎಂದು ಶ್ರೀಹರ್ಷ ತಿಳಿಸಿದರು.
Kshetra Samachara
24/12/2020 07:46 pm