ಮುಲ್ಕಿ: ಕೊರೊನಾ ಲಾಕ್ ಡೌನ್ ಸಂದರ್ಭ ಪರಿಣಾಮಕಾರಿ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್ ಮತ್ತು ನಾನಾ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಮುಲ್ಕಿಯ ಜೇಸಿಐ ಶಾಂಭವಿ ವತಿಯಿಂದ ನಡೆಯಿತು.
ಹೋಟೆಲ್ ಆದಿಧನ್ ಸಭಾಂಗಣದಲ್ಲಿ ಜೇಸಿಐ ಶಾಂಭವಿಯ 2021ನೇ ಸಾಲಿನ ನೂತನ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮತ್ತವರ ತಂಡದ ಪದಗ್ರಹಣ ಸಮಾರಂಭದಲ್ಲಿ ಜೇಸಿಐ ವಲಯ 15ರ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದ ಸೌಜನ್ಯಾ ಹೆಗ್ಡೆ ನೇತೃತ್ವದಲ್ಲಿ ಅತಿಥಿಗಳು ಸನ್ಮಾನ ನೆರವೇರಿಸಿದರು.
ಕೊರೊನಾ ವಾರಿಯರ್ಸ್ ಮುಲ್ಕಿ ನಪಂ ಆರೋಗ್ಯಾಧಿಕಾರಿ ಲಿಲ್ಲಿ ನಾಯರ್, ಸಮುದಾಯ ಆರೋಗ್ಯ ಕೇಂದ್ರದ ನರ್ಸ್ ಶರ್ಮಿಳಾ, ಜೇಸಿಐ ಪೂರ್ವಾಧ್ಯಕ್ಷ ರಾಗಿದ್ದು, ಪ್ರಸ್ತುತ ಮುಲ್ಕಿ ರೋಟರಿ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಕುಮಾರ್ ಶೆಟ್ಟಿ, ಜೇಸಿಐ , ಮುಲ್ಕಿ ನಪಂ ಸದಸ್ಯರಾಗಿ ಆಯ್ಕೆಯಾದ ಹರ್ಷರಾಜ್ ಶೆಟ್ಟಿ ಜಿ.ಎಂ. ಅವರನ್ನು ಸನ್ಮಾನಿಸಲಾಯಿತು.
ಮುಲ್ಕಿ ಶಾಂಭವಿ ಜೇಸಿಐ ನೂತನ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ತಂಡದ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
'ಹಿರಿಯರ ಪ್ರೋತ್ಸಾಹ ಮತ್ತು ಕಿರಿಯರ ಉತ್ಸಾಹಗಳಿಂದ ಸಂಸ್ಥೆ ಮುನ್ನಡೆಯಲಿ. ಯುವ ಜನತೆಯನ್ನು ನಿರಂತರ ತರಬೇತಿಗೊಳಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು' ಎಂದು ಸೌಜನ್ಯಾ ಹೆಗ್ಡೆ ಹೇಳಿದರು.
ಜೇಸಿಐ ವಲಯ 15ರ ಪೂರ್ವ ಉಪಾಧ್ಯಕ್ಷ ಡಾ.ಮನೋಜ್ ಕುಮಾರ್ ಶೆಟ್ಟಿ, ನೂತನ ವಲಯ ಉಪಾಧ್ಯಕ್ಷ ದಶರಥ ಆರ್. ಶೆಟ್ಟಿ, ಕೊಲಕಾಡಿ ಜನಸೇವಾ ಪರಿಷತ್ ಅಧ್ಯಕ್ಷ ಅನಿಲ್ ಕುಮಾರ್ ಕೊಲಕಾಡಿ, ಮುಲ್ಕಿ ವಿಘ್ನೇಶ್ ಕನ್ ಸ್ಟ್ರಕ್ಷನ್ ಮುಖ್ಯಸ್ಥ ವರುಣ್ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.
ನಿರ್ಗಮನ ಅಧ್ಯಕ್ಷ ಗಣೇಶ್ ಭಟ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.
ಜೇಸಿರೆಟ್ ಅಧ್ಯಕ್ಷೆ ಪೂರ್ಣಿಮಾ ಡಿ.ಶೆಟ್ಟಿ, ಜ್ಯೂ. ಜೇಸಿ ಅಧ್ಯಕ್ಷ ಅನುರಾಗ್ ಪಿ.ಕರ್ಕೇರ ಉಪಸ್ಥಿತರಿದ್ದರು.
ಪ್ರವೀಣ್ ಆನಂದ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಆಶ್ರಯ್ ವಿ.ಸುವರ್ಣ ವಂದಿಸಿದರು.
Kshetra Samachara
22/12/2020 07:22 am