ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನೈರುತ್ಯ ರೈಲ್ವೆ ವಲಯದಲ್ಲಿ ನಿಯಮಿತ ವಿಶೇಷ ರೈಲು ಸೇವೆ

ಮಂಗಳೂರು: ಭಾರತೀಯ ನೈರುತ್ಯ ರೈಲ್ವೆ ವಲಯದಲ್ಲಿ ನಿಯಮಿತ ವಿಶೇಷ ರೈಲುಗಳು ಮತ್ತು ಹಬ್ಬದ ವಿಶೇಷ ರೈಲುಗಳು ಆರಂಭಗೊಂಡ ಬಳಿಕ ಪರಿಚಾಲನೆ ಕಾರಣಕ್ಕೆ ಬಹಳಷ್ಟು ಪ್ರಯಾಣಿಕ ರೈಲು ಸೇವೆಗಳ ವೇಳಾಪಟ್ಟಿ ಪರಿಷ್ಕರಿಸಿದೆ.

ನೈರುತ್ಯ ರೈಲ್ವೆಯಿಂದ ಆರಂಭಗೊಳ್ಳುವ/ ನೈರುತ್ಯ ರೈಲ್ವೆಯಲ್ಲಿ ಅಂತ್ಯಗೊಳ್ಳುವ ರೈಲು ಮತ್ತು ನೈರುತ್ಯ ರೈಲ್ವೆಯ ವಲಯದ ಮೂಲಕ ಸಾಗುವ ಹಲವು ರೈಲುಗಳ ಸಮಯದಲ್ಲಿ ಪರಿಷ್ಕರಣೆ ಮಾಡಲಾಗಿದೆ.

ರೈಲು ನಿಲ್ದಾಣದಿಂದ ಹೊರಡುವ ಸಮಯ, ಮಾರ್ಗದಲ್ಲಿನ ನಿಲ್ದಾಣ ತಲುಪುವ ಸಮಯ, ಅಂತಿಮ ನಿಲ್ದಾಣಕ್ಕೆ ಆಗಮಿಸುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಪ್ರಯಾಣಿಕರು ತಮ್ಮ ಪ್ರಯಾಣದ ಆರಂಭಕ್ಕೆ ಸಾಕಷ್ಟು ಸಮಯ ಮೊದಲೇ ತಾವು ಪ್ರಯಾಣ ಮಾಡಲಿರುವ ರೈಲಿನ ಪರಿಷ್ಕೃತ ಸಮಯವನ್ನು ಏಕೀಕೃತ ವಿಚಾರಣಾ ದೂ.ಸಂ.: 139 ಅಥವಾ ನ್ಯಾಷನಲ್ ಟ್ರೈನ್ ಎನ್‌ಕ್ವೈರಿ ಸಿಸ್ಟಮ್ ವೆಬ್‌ಸೈಟ್ ಅಥವಾ ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಹತ್ತಿರದ ಆರಕ್ಷಣಾ ಕೌಂಟರ್/ರೈಲು ನಿಲ್ದಾಣಗಳಲ್ಲಿರುವ ಅಧಿಕೃತ ವ್ಯಕ್ತಿಗಳ ಬಳಿ ವಿಚಾರಿಸಿ ಪರಿಶೀಲಿಸಿಕೊಳ್ಳಬಹುದು.

ವಿಶೇಷ ರೈಲುಗಳಲ್ಲಿ ಸಂಚರಿಸುವ ಎಲ್ಲ ಪ್ರಯಾಣಿಕರು ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಇತ್ಯಾದಿ ನಿಯಮ ಪಾಲಿಸಬೇಕು.

ರೈಲಿನ ಸಮಯ ಬದಲಾವಣೆ/ ರೈಲು ತಡವಾಗಿ ಚಲಿಸುತ್ತಿರುವುದು ಸಹಿತ ಮತ್ತಿತರ ಮಾಹಿತಿ ಪಡೆಯಲು ರೈಲು ಬಳಕೆದಾರರು ಆರಕ್ಷಣಾ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಪ್ರಯಾಣ ಮಾಡುವ ವ್ಯಕ್ತಿಗಳ ದೂರವಾಣಿ ಸಂಖ್ಯೆ ನೀಡಬೇಕು. ಆರೋಗ್ಯಕ್ಕೆ ಸಂಬಂಧಿಸಿದ ಸಲಹೆ/ಸೂಚನೆ ಐಆರ್‌ಸಿಟಿಸಿ (www.irctc.co.in) ಅಥವಾ ಸಂಬಂಧಪಟ್ಟ ರಾಜ್ಯ ಸರಕಾರಗಳ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Edited By : Nagaraj Tulugeri
Kshetra Samachara

Kshetra Samachara

09/12/2020 08:18 am

Cinque Terre

3.68 K

Cinque Terre

0

ಸಂಬಂಧಿತ ಸುದ್ದಿ