ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: " ಕೇಂದ್ರದ ಕೃಷಿ ಕಾಯಿದೆಗಳು ರೈತರ ಪಾಲಿನ ಮರಣ ಶಾಸನ"

ಮಂಗಳೂರು: ಭಾರತ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ನಂತೂರು ವೃತ್ತದಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ  ಹಸಿರು ಸೇನೆ ರೈತ ಸಂಘಟನೆ ಜಿಲ್ಲಾಧ್ಯಕ್ಷ ಓಸ್ವಾಲ್ಡ್  ಫೆರ್ನಾಂಡಿಸ್, ದಪ್ಪ ಚರ್ಮದ ರಾಜಕಾರಣಿಗಳಿಗೆ ದೇಶದ ರೈತರ ಸಂಕಟ, ನೋವು ಅರ್ಥವಾಗದ ಕಾರಣ ಅನ್ನ ನೀಡುವ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕೇಂದ್ರ ಸರಕಾರವನ್ನು ಜರೆದರು.

ಕೇಂದ್ರದ ಕೃಷಿ ಕಾಯ್ದೆಗಳು ರೈತರ ಪಾಲಿನ ಮರಣ ಶಾಸನವಾಗಿದೆ. ಇದನ್ನು ಹಿಂಪಡೆಯಬೇಕು.

ರೈತರು ನ್ಯಾಯಕ್ಕಾಗಿ ಬಂದ್ ಮಾಡಿದರೆ ನಷ್ಟ ಎಂದು ಹೇಳುವವರು ಶಾಸಕರನ್ನು ಖರೀದಿಸಿ ಸರಕಾರ ಮಾಡುವಾಗ, ಎರಡೆರಡು ಬಾರಿ ಚುನಾವಣೆ ನಡೆಸಿದಾಗ ಆಗಿರುವ ನಷ್ಟದ ಬಗ್ಗೆ ಮಾತನಾಡಿಲ್ಲ.

ನಾವು ಎಲ್ಲಿಯೂ ಬಲಾತ್ಕಾರವಾಗಿ ಬಂದ್ ಮಾಡಿಸಿಲ್ಲ. ಸ್ವಯಂ ಪ್ರೇರಿತವಾಗಿ ರೈತರ ಪರವಾಗಿ ಈ ಬಂದ್ ನಡೆಯುತ್ತಿದೆ ಎಂದರು. ಹಲವು ರೈತ ಮುಖಂಡರು ಮಾತನಾಡಿ, ಕೇಂದ್ರ‌‌ ಸರ್ಕಾರದ  ನಿಲುವನ್ನು ಖಂಡಿಸಿದರು.

ಯಾದವ ಶೆಟ್ಟಿ, ಮನೋಹರ ಶೆಟ್ಟಿ,  ಮಾಜಿ ಶಾಸಕ ಐವನ್ ಡಿಸೋಜ, ಜೆಡಿಎಸ್ ಮುಖಂಡ ಎಂ.ಬಿ. ಸದಾಶಿವ,

ಮಾಜಿ ಶಾಸಕ ಮೊಯ್ದಿನ್ ಬಾವ, ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾ ಸಂಘಟನೆಗಳ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಆಲ್ವಿನ್ ಮಿನೇಜಸ್, ಸನ್ನಿ ಡಿಸೋಜ, ಲಿಯೋ ನಝರತ್ ಮೊದಲಾದವರು ಭಾಗವಹಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

08/12/2020 03:02 pm

Cinque Terre

3.45 K

Cinque Terre

1

ಸಂಬಂಧಿತ ಸುದ್ದಿ