ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2018, 2019 ಮತ್ತು 2020ರ ಸಾಲಿನ ಗೌರವ ಪ್ರಶಸ್ತಿ, ಪುರಸ್ಕಾರ ಪ್ರದಾನ ಮತ್ತು ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಅಭಿನಂದನಾ ಕಾರ್ಯಕ್ರಮವು ಇದೇ 10 ರಂದು ಅಪರಾಹ್ನ 3 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ಮಂಗಳೂರಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವ ಸಿ.ಟಿ. ರವಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
2018ರ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾದ ಖಾಲಿದ್ ತಣ್ಣೀರುಬಾವಿ (ಬ್ಯಾರಿ ಕಲೆ), ಝುಲೈಖ ಮುಮ್ತಾಝ್ (ಬ್ಯಾರಿ ಸಾಹಿತ್ಯ), ನೂರ್ ಮುಹಮ್ಮದ್ (ಬ್ಯಾರಿ ಜಾನಪದ), 2019ರ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾದ ಅಬ್ದುಲ್ ರಹ್ಮಾನ್ ಕುತ್ತೆತ್ತೂರು (ಬ್ಯಾರಿ ಸಾಹಿತ್ಯ), ಇಸ್ಮಾಯಿಲ್ ತಣ್ಣೀರುಬಾವಿ (ಬ್ಯಾರಿ ಕಲೆ), ಎಮ್.ಅಹ್ಮದ್ ಬಾವ ಮೊಹಿದಿನ್ (ಬ್ಯಾರಿ ಸಂಘಟನೆ ಮತ್ತು ಸಮಾಜ ಸೇವೆ), 2020ರ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾದ ಬಶೀರ್ ಅಹ್ಮದ್ ಕಿನ್ಯ (ಬ್ಯಾರಿ ಸಾಹಿತ್ಯ), ವೀಣಾ ಮಂಗಳೂರು (ಬ್ಯಾರಿ ಸಿನಿಮಾ, ನಾಟಕ, ಕಲೆ), ಸಿದ್ದೀಕ್ ಮಂಜೇಶ್ವರ (ಬ್ಯಾರಿ ಸಂಘಟನೆ ಮತ್ತು ಸಮಾಜಸೇವೆ) ಅವರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಗೌರವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2018ರ ಸಾಲಿನ ಗೌರವ ಪುರಸ್ಕಾರಕ್ಕೆ ಆಯ್ಕೆಯಾದ ಬಿ.ಎಮ್. ಉಮರಬ್ಬ (ಸಮಾಜ ಸೇವೆ), ವಿ. ಮುಹಮ್ಮದ್ (ಜೀವರಕ್ಷಕ), 2019ರ ಸಾಲಿನ ಗೌರವ ಪುರಸ್ಕಾರಕ್ಕೆ ಆಯ್ಕೆಯಾದ ಅಬ್ದುಲ್ ರಝಾಕ್ ಅನಂತಾಡಿ (ಬ್ಯಾರಿ ಶಿಕ್ಷಣ), ಟಿ.ಎಸ್. ಹುಸೈನ್ (ಬ್ಯಾರಿ ಸಾಹಿತ್ಯ), ಅಬ್ದುಲ್ ಮಜೀದ್ ಸೂರಲ್ಪಾಡಿ (ಬ್ಯಾರಿ ಸಂಯುಕ್ತ), ಆಪತ್ಭಾಂಧವ ಆಸಿಫ್ ಕಾರ್ನಾಡ್ (ಸಮಾಜ ಸೇವೆ), ಆಲಿಕುಂಞಿ ಪಾರೆ (ಬ್ಯಾರಿ ಸಂಘಟನೆ), 2020ರ ಸಾಲಿನ ಗೌರವ ಪುರಸ್ಕಾರಕ್ಕೆ ಆಯ್ಕೆಯಾದ ಡಾ. ಇಸ್ಮಾಯಿಲ್ (ವೈದ್ಯಕೀಯ), ಟಿ.ಎ. ಮೊಹಮ್ಮದ್ ಆಸಿಫ್ (ಶಿಕ್ಷಣ), ಇಲ್ಯಾಸ್ ಮಂಗಳೂರು (ಸಮಾಜ ಸೇವೆ), ರಾಶ್ ಬ್ಯಾರಿ (ಬ್ಯಾರಿ ಸಂಘಟನೆ), ಸಫ್ವಾನ್ ಶಾ ಬಹರೈನ್ (ಬ್ಯಾರಿ ಯುವ ಪ್ರತಿಭೆ) ಇವರುಗಳಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೌರವ ಪುರಸ್ಕಾರ ಮಾಡಲಿದ್ದಾರೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಇವರು ಲಿಪಿ ಸಂಶೋಧನಾ ಸದಸ್ಯರಿಗೆ ಗೌರವ ಮಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಇವರು ‘ಪದ್ಮಶ್ರೀ’ ಹರೇಕಳ ಹಾಜಬ್ಬರಿಗೆ ಅಭಿನಂದನೆ ಮಾಡಲಿರುವರು. ಶಾಸಕರಾದ ಯು.ಟಿ. ಖಾದರ್, ಎನ್.ಎ. ಹ್ಯಾರಿಸ್, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಕಿರುತೆರೆ ಚಲನಚಿತ್ರ ನಟಿ ಮತ್ತು ಯುವ ಜಾಗೃತಿ ಬಳಗದ ಅಧ್ಯಕ್ಷೆ ಕುಮಾರಿ ಪ್ರಾಚೀ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಪರಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಅಶ್ರಫ್ ಅಪೊಲೊ ಮತ್ತು ಬಳಗದಿಂದ ಬ್ಯಾರಿ ಸಂಗೀತ ಕಾರ್ಯಕ್ರಮ ಹಾಗೂ ಸಂಜೆ 6 ಗಂಟೆಯಿಂದ 9ರ ತನಕ ರಹೀಸ್ ಮತ್ತು ಕಲಾವೇದಿ ಕಣ್ಣೂರು ಬಳಗದಿಂದ ಬ್ಯಾರಿ ದಫ್, ಕೋಲ್ಕಲಿ, ಒಪ್ಪನೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
Kshetra Samachara
07/12/2020 06:01 pm