ಮುಲ್ಕಿ: ಅತಿಕಾರಿಬೆಟ್ಟು ಗ್ರಾಪಂ ಕೊಲಕಾಡಿ ನಿವಾಸಿ ಶಶಿಧರ ಶೆಟ್ಟಿ ಎಂಬವರು ತಮ್ಮ ಮನೆ ಮೇಲೆ ಬೀಳುವ ಮಳೆನೀರು ಪೋಲಾಗುವುದನ್ನು ತಡೆಯಲು ಭೂಮಿಗೆ ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಸ್ವಂತ ಖರ್ಚಿನಲ್ಲಿ ಮನೆಯ ಕೊಳವೆಬಾವಿಗೆ ಜಲ ಮರುಪೂರಣ ಘಟಕ ನಿರ್ಮಿಸುತ್ತಿದ್ದು ಮಾದರಿಯಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅತಿಕಾರಿಬೆಟ್ಟು ಗ್ರಾಪಂ ಪಿಡಿಒ ಅವರು ಶಶಿಧರ ಶೆಟ್ಟಿ ಯವರ ನೀರಿಂಗಿಸುವ ಕಾರ್ಯಕ್ಕೆ ಅಭಿನಂದಿಸಿ ಮಾತನಾಡಿ, ಜಲ ಸಂರಕ್ಷಣೆ ಬಗ್ಗೆ ಸಾಮಾಜಿಕ ಕಳಕಳಿ ಶ್ಲಾಘನೀಯ, ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಯಲ್ಲಿ ಆದಷ್ಟು ಜಲ ಮರುಪೂರಣ ಘಟಕಕ್ಕೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
Kshetra Samachara
07/11/2020 11:07 am