ಬಂಟ್ವಾಳ: ಬಂಟ್ವಾಳ ತಾಲೂಕು ವೀರಕಂಭ ಗ್ರಾಪಂ ವ್ಯಾಪ್ತಿಯ ಕಲ್ಮಲೆ ರಸ್ತೆ ಕಾಂಕ್ರೀಟಿಕರಣವಾಗಿದ್ದು, ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ಅವರ 1 ಲಕ್ಷ ರೂ. ಅನುದಾನದಲ್ಲಿ ಈ ರಸ್ತೆ ನಿರ್ಮಾಣಗೊಂಡಿದೆ. ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು.
ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಯಂತಿ ಶೆಟ್ಟಿ,ಹರೀಶ್ ರೈ ಕಲ್ಮಲೆ,ವಿಠಲ್ ರೈ ಕಲ್ಮಲೆ,ಮಂಜಪ್ಪ ಗೌಡ,ಕೃಷ್ಣಪ್ಪ ಸಪಲ್ಯ ಕಲ್ಮಲೆ ಮತ್ತು ನಾಗರಿಕರು ಉಪಸ್ಥಿತರಿದ್ದರು.
Kshetra Samachara
20/10/2020 08:03 pm