ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ ಕೊಡಿಪಾಡಿ ನೀರು ಶೇಖರಣಾ ಘಟಕದ ಶಂಕುಸ್ಥಾಪನೆ

ಮುಲ್ಕಿ : ಮಂಗಳೂರು ಮಹಾನಗರ ಪಾಲಿಕೆ ಕುಡಿಯುವ ನೀರಿನ ಯೋಜನೆ ೨೪×೭ ಕರ್ನಾಟಕ ಸರಕಾರ ಜಲಸಿರಿ ಯೋಜನೆಯಡಿಯಲ್ಲಿ ಸುರತ್ಕಲ್ ಪೂರ್ವ ವಾರ್ಡ್ ೨ ಕೊಡಿಪಾಡಿಯಲ್ಲಿ ನೂತನವಾಗಿ ಸುಮಾರು ೧.೭ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ನೀರು ಶೇಖರಣಾ ಘಟಕದ ಶಂಕುಸ್ಥಾಪನೆಯನ್ನು ಸೋಮವಾರದಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ನಾಗರಿಕರಿಗೆ ೨೪×೭ ಕುಡಿಯುವ ನೀರಿನ ಸರಬರಾಜು ಮಾಡುವ ಸಲುವಾಗಿ ಸುಮಾರು ೫೮೦ ಕೋಟಿ ವೆಚ್ಚದಲ್ಲಿ ನೀರನ್ನು ಮನೆಗೆ ತಲುಪುವಂತ ವ್ಯವಸ್ಥೆ ಮಾಡಲಾಗುತ್ತಿದೆ.

ಸುಮಾರು ೨೦ ರಷ್ಟು ಒವರ್ ಹೆಡ್ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಲಿದ್ದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧೧ ಟ್ಯಾಂಕ್ ಗಳನ್ನು ನಿರ್ಮಿಸಲಿದ್ದು ಇದರ ಮೊದಲ ಹಂತವಾಗಿ ಪ್ರಥಮ ಟ್ಯಾಂಕ್ ನ ಶಂಕು ಸ್ಥಾಪನೆಯನ್ನು ನೆರವೇರಿಸಿದ್ದು ಸುಮಾರು ೫೦ ಸೆ೦ಟ್ಸ್ ಜಾಗದಲ್ಲಿ ಮತ್ತು ಹೆಚ್ಚುವರಿ ನೀರಿನ ಸೌಲಭ್ಯಕ್ಕಾಗಿ ಹೆಚ್ಚುವರಿ ಜಾಗವನ್ನು ಸರಕಾರದ‍ ಮೂಲಕ ಮೀಸಲಿರಿಸಿದ್ದೇವೆ.

ಜನರಿಗೆ ನೀರಿನ ಸಮಸ್ಯೆ ಬಾರದಂತೆ ಈ ಮಹತ್ತರ ಯೋಜನೆ ರೂಪಿಸಿದ್ದು ಅಲ್ಲದೇ ೧೩ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲೂ ಜಲಜೀವನ್ ಯೋಜನೆಯ ಮುಖಾಂತರ ಕುಡಿಯುವ ನೀರಿನ ಸೌಲಭ್ಯ ಗ್ರಾಮಾಂತರ ಪ್ರದೇಶದ ಜನಗಳಿಗೂ ಒದಗಿಸಲಾಗುವುದು ಎಂದರು.

Edited By :
Kshetra Samachara

Kshetra Samachara

19/10/2020 06:34 pm

Cinque Terre

3.36 K

Cinque Terre

0

ಸಂಬಂಧಿತ ಸುದ್ದಿ