ಮೂಡುಬಿದಿರೆ: ಅಗ್ನಿಶಾಮಕ ದಳದ ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಗೌರವ
ಮೂಡುಬಿದಿರೆ: ತಾಲೂಕಿನ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವೀಣ್ ಮತ್ತು ಪ್ರಮುಖ ಅಗ್ನಿಶಾಮಕರಾಗಿ ಸೇವೆ ಸಲ್ಲಿಸುತ್ತಿರುವ ಯೋಗೀಶ್ ಪಿ.ಬಂಗೇರ ಅವರು ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಪ್ರವೀಣ್ ಅಗ್ನಿಶಾಮಕ ದಳದಲ್ಲಿ ಕಳೆದ 38 ವರ್ಷಗಳಿಂದ ರಾಜ್ಯದ ನಾನಾ ಕಡೆ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಮೂಡುಬಿದಿರೆ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಅಧಿಕಾರಿಯಾಗಿ ಮತ್ತು ಯೋಗೀಶ್ ಬಂಗೇರ ಕಳೆದ 28 ವರ್ಷಗಳಿಂದ ಅಗ್ನಿಶಾಮಕ ಠಾಣೆಯ ವಿವಿಧ ಕಡೆ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದು, ಇದೀಗ ಮೂಡುಬಿದಿರೆಯ ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇವರಿಬ್ಬರ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ ರಾಷ್ಟ್ರಪತಿ ಪದಕಕ್ಕೆ ಆಯ್ಕೆ ಮಾಡಿದ್ದು, ಇಂದು ಪದಕ ಸ್ವೀಕರಿಸಿದರು.