ಮುಲ್ಕಿ: ಕಟೀಲು ಬಲ್ಲಣ ಪ್ರೀತಿ ಸದನದ ಮಕ್ಕಳ ಕುಟೀರದಲ್ಲಿ ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರ್ ಸಂಸ್ಥೆ ವತಿಯಿಂದ ನಿರ್ಗತಿಕ ಮಕ್ಕಳನ್ನು ಪಾಲನೆ- ಪೋಷಣೆ ಮಾಡುತ್ತಿರುವ ಸಿಸ್ಟರ್ ಮಾರ್ಗರೇಟ್ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭ ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಮಕ್ಕಳ ಕುಟೀರದ ಬೋರ್ ವೆಲ್ ಪಂಪು ದುರಸ್ತಿಯ ಬಗ್ಗೆ ಸಹಾಯಧನ ವಿತರಿಸಲಾಯಿತು.
ಲಯನ್ಸ್ ಅಧ್ಯಕ್ಷ ಸ್ಟ್ಯಾನಿ ಪಿಂಟೋ, ಕಾರ್ಯದರ್ಶಿ ಚಂದ್ರಶೇಖರ್, ಗಂಗಾಧರ್ , ಬೆಲ್ಚರ್ ಮಸ್ಕರೇನಸ್, ದಯಾನಂದ ರೈ, ದಾಮೋದರ ಸಾಲ್ಯಾನ್, ರೋನಾಲ್ಡ್ ಡಿಸೋಜ, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/01/2021 01:01 pm