ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಮಾನವತೆ ಫಸ್ಟ್; ತೀವ್ರ ಗಾಯಗೊಂಡ ಮುಸ್ಲಿಂ ಬಾಂಧವರನ್ನು ಆಸ್ಪತ್ರೆಗೆ ದಾಖಲಿಸಿದ ಹಿಂದೂ ಆಟೋ ಚಾಲಕ

ಬಂಟ್ವಾಳ: ಸಣ್ಣಪುಟ್ಟ ವಿಚಾರಗಳಿಗೆ ಜಾತಿ, ಕೋಮು ಸಂಘರ್ಷ ಮಾಡುವವರು ಒಂದೆಡೆ ಇದ್ದರೆ ಸೌಹಾರ್ದತೆ, ಮಾನವೀಯತೆ ಮೆರೆಯುವವರು ಹಲವರು ಇದ್ದಾರೆ ಎಂಬುದಕ್ಕೆ ಹಲವು ನಿದರ್ಶನಗಳನ್ನು ನಾವು ಕಂಡಿದ್ದೇವೆ, ಕಾಣುತ್ತಿದ್ದೇವೆ.

ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಇಂಥದ್ದೊಂದು ಘಟನೆ ಮತ್ತೊಮ್ಮೆ ನಡೆಯಿತು. ಇಲ್ಲಿನ ಆಟೋ ಚಾಲಕ ವಿಠಲ ಕಂದೂರು ಸ್ಕೂಟರ್ ಗಳ ಪರಸ್ಪರ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ಮುಸ್ಲಿಂ ಯುವಕರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮೂಲಕ ಜಾತಿ- ಧರ್ಮಕ್ಕೆ ಮಿಗಿಲಾಗಿ ಮಾನವೀಯತೆ ಮೊದಲು ಎಂಬುದನ್ನು ಸಾರಿದರು.

ಸಜೀಪ ಮೂಡ ಗ್ರಾಮದ ಪೆಲತ್ತಕಟ್ಟೆ ಪಕ್ಕ ಕಂದೂರು ಎಂಬಲ್ಲಿ ಭಾನುವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮುಸ್ಲಿಂ ಯುವಕರಿಬ್ಬರನ್ನು ಸ್ಥಳೀಯರ ಸಹಕಾರದಿಂದ ವಿಠಲ ಕಂದೂರು ತನ್ನ ಆಟೋ ರಿಕ್ಷಾದಲ್ಲಿ ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಿ ಗಾಯಾಳುಗಳ ಜೀವ ಉಳಿಸುವಲ್ಲಿ ಯಶಸ್ವಿಯಾದರು.

ಯಾವುದೇ ಬಾಡಿಗೆ ಪಡೆಯದೆ ಮಾನವೀಯತೆಯಿಂದ ಮತ್ತು ಚಾಲಕನಾಗಿ ಇದು ನನ್ನ ಕರ್ತವ್ಯ ಎಂದುಕೊಂಡು ಈ ಕಾರ್ಯ ವಿಠಲ ಮಾಡಿದ್ದಾರೆ. ಮಾರ್ನಬೈಲ್ ಆಟೋರಿಕ್ಷಾ ಪಾರ್ಕಿನ ಸದಸ್ಯರಾಗಿರುವ ವಿಠಲ ಕಂದೂರು, ಈ ಹಿಂದೆ ಹಲವು ಬಾರಿ ರಸ್ತೆ ಅಪಘಾತಗಳು ನಡೆದಾಗಲೂ ತನ್ನ ಆಟೋದಲ್ಲಿ ಬಾಡಿಗೆ ಪಡೆಯದೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಮಾನವೀಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ವಿಠಲ ಕಂದೂರು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.

Edited By : Nirmala Aralikatti
Kshetra Samachara

Kshetra Samachara

12/01/2021 07:09 pm

Cinque Terre

7.07 K

Cinque Terre

2

ಸಂಬಂಧಿತ ಸುದ್ದಿ