ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಡಗೋಡ(ಉ.ಕ.): ಅಪಘಾತ ತಡೆಗೆ ಪೊಲೀಸರಿಂದ ಹೊಸ ಐಡಿಯಾ!: ಬೀಡಾಡಿ ಜಾನುವಾರುಗಳಿಗೆ ರಿಫ್ಲೆಕ್ಟರ್ ಅಳವಡಿಕೆ

ಮುಂಡಗೋಡ ( ಉತ್ತರ ಕನ್ನಡ): ಅಪಘಾತ ತಡೆಯಲು ಪೊಲೀಸರು ಏನೆಲ್ಲ ಕಸರತ್ತು ಮಾಡುತ್ತಾರೆ. ಆದರೆ, ಮುಂಡಗೋಡ ಪೊಲೀಸರು ವಿಭಿನ್ನವಾಗಿ ಚಿಂತನೆ ನಡೆಸಿ ಕಾರ್ಯರೂಪಕ್ಕೂ ತಂದಿದ್ದಾರೆ.

ಅಪಘಾತ ತಡೆಗೆ ದನಗಳಿಗೆ ಟೇಪ್ ಸುತ್ತಿರುವುದನ್ನು ಎಲ್ಲಾದರೂ, ಯಾವತ್ತಾದರೂ ಕೇಳಿದ್ದೀರಾ ? ಇಲ್ಲ ಅಂದ್ರೆ ಇದನ್ನೊಮ್ಮೆ ನೋಡಿ!.

ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ. ರಸ್ತೆಗಳಲ್ಲಿ ಬೀಡಾಡಿ ದನಗಳಿಂದಾಗಿ ಸಾರ್ವಜನಿಕರು, ವಾಹನ ಸವಾರರು ಹೈರಾಣಾಗಿದ್ದಾರೆ. ಅಲ್ಲದೆ, ದನಗಳಿಂದಾಗಿ ತಾಲೂಕಿನಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಇದಕ್ಕೆ ಮುಂಡಗೋಡ ಪೊಲೀಸ್ ಠಾಣೆ ಪಿಎಸ್‌ಐ ಬಸವರಾಜ ಮಬನೂರ ಹೊಸ ಉಪಾಯ ಕಂಡುಹಿಡಿದಿದ್ದಾರೆ. ಅದೇನಪ್ಪಾ ಅಂದ್ರೆ, ಬೀಡಾಡಿ ದನಗಳನ್ನು ಹಿಡಿದು, ಕೊಂಬುಗಳಿಗೆ ರಿಫ್ಲೆಕ್ಟರ್ ಟೇಪ್‌ ಸುತ್ತುವುದು!

ಇದಕ್ಕಾಗಿ ಪೊಲೀಸ್ ಸಿಬ್ಬಂದಿಯನ್ನೂ ನಿಯೋ ಜಿಸಿದ್ದು, ಅವರು ಬೀಡಾಡಿ ದನ ಪತ್ತೆಹಚ್ಚಿ ರಿಫ್ಲೆಕ್ಟರ್ ಟೇಪ್ ಸುತ್ತುವ ಕಾಯಕದಲ್ಲಿ ತೊಡಗಿದ್ದಾರೆ. ಈ ರೀತಿ ಮಾಡುವುದರಿಂದ ದನಗಳು ರಸ್ತೆಯಲ್ಲಿ ಸುತ್ತಾಡುತ್ತಿರುವಾಗ ವಾಹನಗಳ ಹೆಡ್ ಲೈಟ್‌ಗೆ ಸ್ಟಿಕ್ಕರ್ ರಿಫ್ಲೆಕ್ಟ್ ಆಗುವುದರಿಂದ ಅಪಘಾತ ತಡೆಯಬಹುದು ಎಂಬುದು ಅವರ ಅಭಿಪ್ರಾಯ. ಪೊಲೀಸರ ಈ ಕಾರ್ಯಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳ ಸಹಿತ ಗ್ರಾಮಸ್ಥರು, ಪ್ರಾಣಿ ಪ್ರಿಯರು, ವಾಹನ ಸವಾರರು ಫುಲ್ ಖುಷ್ ಆಗಿದ್ದು, ಪಿಎಸ್‌ಐ ಬಸವರಾಜ ಮಬನೂರ ಅವರನ್ನು ಅಭಿನಂದಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

05/10/2020 11:39 pm

Cinque Terre

4.67 K

Cinque Terre

0

ಸಂಬಂಧಿತ ಸುದ್ದಿ