ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿಜಾರು: ಕನ್ನಡ ರಾಜ್ಯೋತ್ಸವ ಹಿನ್ನೆಲೆ; ಈ ಹೋಟೆಲ್ ನಲ್ಲಿ ತಿಂಡಿ ಉಚಿತ!

ಮುಲ್ಕಿ: ಮೂಡಬಿದ್ರೆ ಸಮೀಪದ ಮಿಜಾರು ಎನ್ನುವುದು ಕೇವಲ ಊರಿನ ಹೆಸರಲ್ಲ, ಹಲವಾರು ವಿಶೇಷತೆ ಹೊಂದಿರುವಂತಹ ಊರೂ ಹೌದು.

ಇಂದಿನ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಮಿಜಾರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ ಇರುವ ಶ್ರೀ ಕೃಷ್ಣ ಹೋಟೇಲ್ ನ ಮಾಲೀಕರಾದ ರಘುವೀರ್ ( ಊರಿನ ನೆಚ್ಚಿನ ಆಮ್ಮಿಯಣ್ಣ) ಅವರು ಕರ್ನಾಟಕ ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ ತನ್ನ ಹೋಟೆಲ್ ಗೆ ಬರುವ ಗ್ರಾಹಕರಿಗೆ ಉಚಿತ ತಿಂಡಿ - ತಿನಿಸನ್ನು ಹಲವಾರು ವರ್ಷಗಳಿಂದ ನೀಡುತ್ತಿದ್ದಾರೆ! ಕನ್ನಡಾಂಬೆಯ ಸೇವೆಯನ್ನು ಜನರ ಹಸಿವು ತಣಿಸುವ ಮೂಲಕ ಮಾಡುತ್ತಿರುವ ತಮಗೆ ಅಭಿನಂದನೆಗಳು ಎಂದು ನಾಗರಿಕರು ಶುಭ ಹಾರೈಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

01/11/2020 11:50 am

Cinque Terre

7.48 K

Cinque Terre

4

ಸಂಬಂಧಿತ ಸುದ್ದಿ