ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಯುವಜನರ ದೈಹಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಕ್ರೀಡಾ ಚಟುವಟಿಕೆ ಬಹು ಮುಖ್ಯ"

ಮಂಗಳೂರು:ಯುವಜನರ ದೈಹಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಕ್ರೀಡಾ ಚಟುವಟಿಕೆ ಬಹು ಮುಖ್ಯ ಭೂಮಿಕೆ ವಹಿಸುತ್ತದೆ. ವೃತ್ತಿಯ ಜೊತೆಗೆ ನಿರಂತರವಾಗಿ ಕ್ರೀಡಾ ಚಟುವಟಿಕೆ ಮತ್ತು ದೈಹಿಕ ಕಸರತ್ತಿನ ಆಟೋಟಗಳಲ್ಲಿ ಭಾಗ ವಹಿಸುವುದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಮತ್ತು ಆತ್ಮ ವಿಶ್ವಸವನ್ನು ಹೆಚ್ಚಿಸುತ್ತದೆ.

ಈ ನಿಟ್ಟಿನಲ್ಲಿ ಗೃಹರಕ್ಷಕರು ತಮ್ಮ ದೈನಂದಿನ ಕರ್ತವ್ಯದ ನಡುವೆಯೂ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದು ಸ್ವಾಗತಾರ್ಹ ಎಂದುದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಮತ್ತು ಪೌರರಕ್ಷಣಾ ಪಡೆಯ ಮುಖ್ಯ ಪಾಲಕ ಡಾ|| ಮುರಲೀ ಮೋಹನ್ ಚೂಂತಾರು ಹೇಳಿದರು.

ಮಂಗಳೂರಿನ ಮಂಗಳಾ ಮೈದಾನದಲ್ಲಿ ಮಂಗಳೂರು ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ನಡೆದ ದಕ್ಷಿಣ ಕನ್ನಡ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 30 ವರ್ಷಗಳಿಗಿಂತ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ 200 ಮತ್ತು 800 ಮೀಟರ್ ಓಟದಲ್ಲಿ ಚಿನ್ನ ಮತ್ತು ಲಾಂಗ್ ಜಂಪ್ ನಲ್ಲಿ ಬೆಳ್ಳಿ ಪದಕ ಗೆದ್ದು ಉಳ್ಳಾಲ ಗೃಹರಕ್ಷಕದಳ ಘಟಕದ ಹಿರಿಯ ಗೃಹರಕ್ಷಕಿ ದಿವ್ಯಾ ಪೂಜಾರಿ, ಮೆಟಲ್ ನಂ 69, ರವರನ್ನು ಗೌರವಿಸಿ ಮಾತನಾಡಿದರು

ಉಪ ಸಮಾದೇಷ್ಟ ರಮೇಶ್, ಕಛೇರಿ ಅಧೀಕ್ಷಕ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ. ಎಸ್, ದಲಾಯತ್ ಮೀನಾಕ್ಷಿ, ಉಳ್ಳಾಲ ಘಟಕದ ಹಿರಿಯ ಗೃಹರಕ್ಷಕ ಸುನೀಲ್ ಪೂಜಾರಿ, ಅಬ್ದುಲ್ ಹಮೀದ್, ರಂಜಿತ್ ಮತ್ತು ಮಂಗಳೂರು ಘಟಕದ ಸುನೀಲ್ ಕುಮಾರ್, ದಿವಾಕರ್, ಜ್ಞಾನೇಶ್ ಮತ್ತು ಜಯಲಕ್ಷ್ಮಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

29/09/2022 10:16 am

Cinque Terre

864

Cinque Terre

0

ಸಂಬಂಧಿತ ಸುದ್ದಿ