ಮುಲ್ಕಿ:ಆಯುಷ್ ಇಲಾಖೆ, ದಕ್ಷಿಣ ಕನ್ನಡ, ಸರಕಾರಿ ಆಯುಷ್ ಚಿಕಿತ್ಸಾಲಯ, ಬಳ್ಕುಂಜೆ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೌಷ್ಟಿಕ ಆಹಾರ ಜಾಗೃತಿ ಸಪ್ತಾಹ ಕಾರ್ಯಕ್ರಮ ನಡೆಯಿತು.
ಬಳ್ಕುಂಜೆ ಆಯುಷ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೋಭಾರಾಣಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ, ದೈಹಿಕ ಶುಚಿತ್ವ, ಯೋಗ ಮತ್ತು ಮಾನಸಿಕ ಸದೃಢತೆ ಬಗ್ಗೆ ಉಪನ್ಯಾಸ ನೀಡಿದರು ಹಾಗೂ ಭಾರತೀಯ ವೈದ್ಯ ಪದ್ಧತಿಯ ಬಗ್ಗೆ ಮಾಹಿತಿ ನೀಡಿ ಜೌಷದೀಯ ಗಿಡಗಳನ್ನು ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಅಧ್ಯಕ್ಷತೆ ವಹಿಸಿದ್ದರು.
ಆಳ್ವಾಸ್ ಹೋಮಿಯೋಪಥಿಕ್ ಕಾಲೇಜಿನ ಇನ್ಟರ್ನ್ ಶಿಪ್ ವಿದ್ಯಾರ್ಥಿಗಳಾದ ಧನ್ಯ ಮತ್ತು ಮಾನಸ, ಆರ್.ಕೆ.ಎಸ್.ಕೆ. ಕೌನ್ಸಿಲರ್ ಶಿವಪ್ರಸಾದ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಅನಿತಾ ಉಪಸ್ಥಿತರಿದ್ದರು. ಉಪನ್ಯಾಸಕ ರಮಾನಂದ್ ಕೆ. ನಿರೂಪಿಸಿದರು.
Kshetra Samachara
06/09/2022 10:13 am