ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಉಚಿತ ದಂತ ವೈದ್ಯಕೀಯ ಕೇಂದ್ರ ಉದ್ಘಾಟನೆ

ಸುರತ್ಕಲ್: ಉತ್ತಮ ಗುಣಮಟ್ಟದ ದಂತ ಚಿಕಿತ್ಸೆ ತಜ್ಞ ವೈದ್ಯರಿಂದ ಉಚಿತವಾಗಿ ಸುರತ್ಕಲ್ ನಗರ ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ ಸಿಗಲಿದೆ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಹೇಳಿದರು.

ಅವರು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮಂಗಳೂರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದರ ವತಿಯಿಂದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್ ನಲ್ಲಿ ಪ್ರಾರಂಭಿಸಲಾದ ದಂತ ವೈದ್ಯಕೀಯ ಕೇಂದ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಪರಿಸರದಲ್ಲಿ ಗಣ್ಯರೊಂದಿಗೆ ಸೇರಿ ಶಾಸಕರು ಗಿಡ ನೆಟ್ಟರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್ ಭಂಡಾಲ, ಪ್ರೊ. ಉಪ ಕುಲಪತಿ (ಮಂಗಳೂರು ವಿಭಾಗ) ಮಾಹೆ ಮಣಿಪಾಲದ ಡಾ.ದಿಲೀಪ್ ನಾಯಕ್, ಡಾ. ಉನ್ನಿಕೃಷ್ಣನ್ ಚಿ. ಡೀನ್, ಕೆಎಂಸಿ ಮಂಗಳೂರು, ಡಾ. ಅಶಿತಾ ಎಸ್‌.ಡಾ. ಭಾಸ್ಕರ್ ಕೋಟ್ಯಾನ್, ಆಡಳಿತ ವೈದ್ಯಕೀಯ ಅಧಿಕಾರಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್, ಪಾಲಿಕೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

13/07/2022 01:56 pm

Cinque Terre

1.55 K

Cinque Terre

0

ಸಂಬಂಧಿತ ಸುದ್ದಿ