ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಲಾವಿದನ ವೈದ್ಯಕೀಯ ಚಿಕಿತ್ಸೆಗೆ ಜಾಗತಿಕ ಬಂಟರ ಸಂಘದ ಅಧ್ಯಕ್ಷರಿಂದ ನೆರವು

ಮುಲ್ಕಿ: ಕಿನ್ನಿಗೋಳಿಯ ವಿಜಯ ಕಲಾವಿದರು ಬಳಗದ ರಾಜೇಶ್ ಕೆಂಚನಕೆರೆಯವರ ವೈದ್ಯಕೀಯ ಚಿಕಿತ್ಸೆಗಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ರೂ.25,000 ದ ಚೆಕ್ಕನ್ನು ಹಸ್ತಾಂತರಿಸಿದರು.

ಈಗಾಗಲೇ ಐಕಳ ಹರೀಶ್ ಶೆಟ್ಟಿಯವರು ಕಿನ್ನಿಗೋಳಿಯ ವಿಜಯ ಕಲಾವಿದರು ಬಳಗದ ಪುಷ್ಪರಾಜ ಶೆಟ್ಟಿ ಶಿಮಂತೂರು ಹಾಗೂ ಸೀತಾರಾಮ ಶೆಟ್ಟಿಯವರಿಗೂ ವೈದ್ಯಕೀಯ ನೆರವು ನೀಡಿದ್ದು ಪ್ರತೀ ತಿಂಗಳು ಸಹಾಯಹಸ್ತ ನೀಡುತ್ತಿದ್ದಾರೆ.

ಕಲಾವಿದರಿಗೆ ಸಹಾಯ ಹಸ್ತ ನೀಡಿದ ಐಕಳ ಹರೀಶ್ ಶೆಟ್ಟಿಯವರಿಗೆ ವಿಜಯಾ ಕಲಾವಿದರು ಬಳಗ ಕೃತಜ್ಞತೆ ಸಲ್ಲಿಸಿದೆ

Edited By : PublicNext Desk
Kshetra Samachara

Kshetra Samachara

02/06/2022 08:01 am

Cinque Terre

2.17 K

Cinque Terre

0

ಸಂಬಂಧಿತ ಸುದ್ದಿ