ಮುಲ್ಕಿ: ಪ್ರತಿಯೊಂದು ಅಂಗನವಾಡಿಯಲ್ಲಿ ಸುಮುದಾಯ ಆದಾರಿತ ಚಟುವಟಿಗಳ ಮೂಲಕ ಮಕ್ಕಳಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ ಉತ್ತಮ ಪೌಷ್ಟಿಕತೆ ದೊರಕುವಂತಾಗಬೇಕೆಂದು ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಡಿ. ಪೂಂಜಾ ಹೇಳಿದರು.
ಬಳ್ಕುಂಜೆ ಗ್ರಾ ಪಂ ವ್ಯಾಪ್ತಿಯ ಅಂಬಾ ಭವಾನಿ ಭಜನಾ ಮಂದಿರದಲ್ಲಿ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ( ಗ್ರಾ ) , ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರ , ಬಳ್ಕುಂಜೆ ಗ್ರಾ ಪಂ ಆಶ್ರಯದಲ್ಲಿ ಪೋಷಣ್ ಅಭಿಯಾನ ಯೋಜನೆಯಡಿ ಜರಗಿದ ಮಕ್ಕಳಿಗೆ ಅನ್ನ ಪ್ರಾಶನ ನೀಡುವ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನೆಯ ಕಟೀಲು ವಲಯದ ಮೇಲ್ವಿಚಾರಕಿ ಇಂದಿರಾ ಮೋಹನ್‌ದಾಸ್ , ಬಳ್ಕುಂಜೆ ಗ್ರಾ ಪಂ ಸದಸ್ಯರಾದ ನವೀನ್‌ಚಂದ್ರ ಶೆಟ್ಟಿ , ಗೀತಾ ಕೆ, ಸುಜಾತಾ, ಅಂಬಾಭವಾನಿ ಭಜನಾ ಮಂದಿರದ ಅಧ್ಯಕ್ಷ ದಯಾನಂದ , ಆಶಾಕಾರ್ಯಕರ್ತೆಯರು,ಅಂಗನವಾಡಿ ಮೇಲ್ವಿಚಾರಕರು ಉಪಸ್ಥಿತರಿದ್ದರುತುಳಸಿ ಸ್ವಾಗತಿಸಿದರು. ಸತ್ಯ ಶೆಟ್ಟಿ ವಂದಿಸಿದರು.
Kshetra Samachara
19/03/2022 02:43 pm