ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೋನಾ ದಿನಗಳಲ್ಲಿಯೂ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ

ಮುಲ್ಕಿ: ಮುಲ್ಕಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಪ್ರಬಂಧಕರಾದ ಸುರೇಶ್ ಅಮಿನ್ ವಹಿಸಿ ಮಾತನಾಡಿ ಕೊರೋನಾ ಸಂಕಷ್ಟದ ದಿನಗಳಲ್ಲಿ ಏಕಾಗ್ರತೆ ಮೂಲಕ ವೇದಿಕೆಯನ್ನು ಹಂಚಿಕೊಂಡು ಉತ್ತಮ ಸಾಧನೆ ಮೆರೆದ ವಿದ್ಯಾರ್ಥಿಗಳ ಕಾರ್ಯವೈಖರಿ ಶ್ಲಾಘನೀಯ ಎಂದರು ಸಮಾರಂಭದ ಮುಖ್ಯ ಅತಿಥಿಗಳಾಗಿ ಶಾಖೆಯ ಸಿಬ್ಬಂದಿಗಳಾದ ಸುಮನಾ ಜಿ ರಾವ್,ಧನಂಜಯ, ರಮ್ಯ, ಸುನಿತಾ, ವಿಶ್ವನಾಥ, ಚೇತನ ಜಿ ದೇವಾಡಿಗ, ಕಾರ್ತಿಕ ಎಂ.ಹಾಗೂ ಮತ್ತಿತರರು ಉಪಸ್ಥಿತರಿದ್ದರು.

2019-20 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 97.5 ಅಂಕಗಳಿಸಿದ ಶಾಖೆಯ ಅಧಿಕಾರಿ ಆರತಿ ಜಿ ಪ್ರಭು ರವರ ಪುತ್ರಿ ಓಂಕಾರ್ ಜಿ ಪ್ರಭು ಹಾಗೂ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ವಿಜೇತರಾದ ಮಾಧವ ಬಂಗೇರ ಪುತ್ರ ವರುಣ್ ಬಂಗೇರ ರವರನ್ನು ಬ್ಯಾಂಕ್ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಹಾಗೂ ಕಳೆದ 25 ವರ್ಷಗಳಿಂದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಆರತಿ ಜಿ ಪ್ರಭು ರವರನ್ನು ಗೌರವಿಸಲಾಯಿತು.

Edited By : Nirmala Aralikatti
Kshetra Samachara

Kshetra Samachara

13/01/2021 12:08 pm

Cinque Terre

5.57 K

Cinque Terre

1

ಸಂಬಂಧಿತ ಸುದ್ದಿ