ಸುಳ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹುಟ್ಟುಹಬ್ಬದ ದಿನದಂದು ದಂಪತಿ ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಸುಳ್ಯದ ರಂಜಿತ್ ಪೂಜಾರಿ ಹಾಗೂ ಅವರ ಪತ್ನಿ ಕೀರ್ತಿಕಾ ಅವರು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲಿನ ಅಭಿಮಾನದ ದ್ಯೋತಕವಾಗಿ ಸಚಿವರ ಹುಟ್ಟುಹಬ್ಬದ ದಿನದ ಪ್ರಯುಕ್ತ ಶುಕ್ರವಾರ ರಕ್ತದಾನ ಮಾಡಿದರು.
ಈ ಸಂದರ್ಭ ಈಗಾಗಲೇ ಹಲವಾರು ರಕ್ತದಾನದ ಮೂಲಕ ಜನಪ್ರಿಯರಾಗಿರುವ ಸಮಾಜ ಸೇವಕ ಸುಳ್ಯದ ವರ್ತಕರ ಸಂಘದ ಅಧ್ಯಕ್ಷರೂ ಆಗಿರುವ ಪಿ.ಬಿ.ಸುಧಾಕರ ರೈ, ಅಭಿಲಾಶ್ ಎಸ್.ಸುಳ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು, ದಂಪತಿಯ ಸಮಾಜಮುಖಿ ಮಾದರಿ ಕೈಂಕರ್ಯ ವನ್ನು ಶ್ಲಾಘಿಸಿದರು.
Kshetra Samachara
02/01/2021 11:00 am