ತಾಲೂಕಿನ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ಭಾನುವಾರ ತೆರೆದಿದ್ರೂ, ವೈದ್ಯರು, ಸಿಬ್ಬಂದಿಗಳು ಇಲ್ಲದೇ ಇದ್ದ ಘಟನೆ ಬೆಳಗ್ಗೆ ನಡೆದಿದ್ದು, ಈ ಬಗೆಗಿನ ವಿಡಿಯೋ ಇದೀಗ ವೈರಲ್ ಆಗಿದೆ.
ಬೆಳ್ಳಾರೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಔಷಧಿ ವಿತರಕರು, ರಿಸೆಪ್ಷನ್ ನ ಸಿಬ್ಬಂದಿ ಸೇರಿದಂತೆ ಯಾವುದೇ ಸಿಬ್ಬಂದಿ ಇರಲಿಲ್ಲ. ಔಷಧಿ ತೆಗೆದುಕೊಳ್ಳಲು ಬೆಳಗ್ಗೆ 9.15 ಕ್ಕೆ ಇಬ್ಬರು ಬಂದಿದ್ರು. ಆ ಸಂದರ್ಭದಲ್ಲಿದ್ದ ಒಬ್ಬ ಸಿಬ್ಬಂದಿ ಇನ್ನೊಬ್ಬರು ಬರ್ತಾರೆ ಅಂತ ಹೇಳಿ ಹೋದ್ರು. ಈಗ ಇಲ್ಲಿ ಯಾರೂ ಇಲ್ಲ ಎಂದು ಔಷಧಿ ತೆಗೆದುಕೊಳ್ಳಲು ಬಂದವರು ಮಾತನಾಡುವುದು ವಿಡಿಯೋದಲ್ಲಿದೆ. ಅಲ್ಲದೇ ಎಲ್ಲಾ ಕೊಠಡಿಗಳ ಬಾಗಿಲು ತೆರೆದಿದ್ದು, ಒಳಗೆ ಯಾರೂ ಇರಲ್ಲ. ಯಾವ ಕಾರಣಕ್ಕೆ ಕೇಂದ್ರವನ್ನು ತೆರೆದು ಹೊರಗೆ ತೆರಳಿದ್ದಾರೆ ಎಂದು ತಿಳಿದುಬಂದಿಲ್ಲ.
24 ಗಂಟೆ ಸೇವೆ ನೀಡಬೇಕಾದ ಆಸ್ಪತ್ರೆಯಲ್ಲಿ ಹಗಲು ಹೊತ್ತಿನಲ್ಲೇ ಯಾರೂ ಇಲ್ಲದೇ ಇರೋ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
28/03/2022 12:41 pm