ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಪಿವಿಎಸ್ ಬಳಿ ಇರುವ ಪಿಎನ್ ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ರಚಿಸಲಾದ ರಂಗೋಲಿಯಲ್ಲಿ ಕೊರೊನಾ ಜಾಗೃತಿ ಸಂದೇಶ ನೀಡಲಾಯಿತು.
ಕಚೇರಿಯಲ್ಲಿ ರಚಿಸಲಾದ ರಂಗೋಲಿಯಲ್ಲಿ ದೀಪಾವಳಿ ಹಬ್ಬಕ್ಕೆ ಶುಭ ಕೋರುವ ಜೊತೆಗೆ ಹಬ್ಬದ ಸಮಯದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕುರಿತಾಗಿಯೂ ಜಾಗೃತಿ ಮೂಡಿಸಿದ್ದು ಗಮನ ಸೆಳೆಯಿತು.
ಶಾಖೆಯ ಕಸ್ಟಮರ್ ಸರ್ವಿಸ್ ಮ್ಯಾನೇಜರ್ ವಿಜಯ್ ಕುಮಾರ್, ಟೆಕ್ನಿಕಲ್ ಮ್ಯಾನೇಜರ್ ಹರೀಶ್ ಶೆಟ್ಟಿ, ಕಲೆಕ್ಷನ್ ಇನ್ ಚಾರ್ಜ್ ಗೌತಮ್ ಸಾಲ್ಯಾನ್, ಎಫ್ ಡಿ ಸೇಲ್ಸ್ ಮ್ಯಾನೇಜರ್ ಚೇತನ್, ರಿಲೇಶನ್ ಶಿಪ್ ಆಫೀಸರ್ ಶಮಿತ್, ಪೂಜಾ, ನಿರೀಕ್ಷಾ ಶೆಟ್ಟಿ, ಶಶಿಧರ್ ನೇತೃತ್ವ ವಹಿಸಿದ್ದರು.
Kshetra Samachara
14/11/2020 07:41 am