ಮಂಗಳೂರು : ಇಲ್ಲಿನ ತಲಪಾಡಿ ಸೋಶಿಯಲ್ ಅಚೀವ್ ಮೆಂಟ್ ಫೋರಂ ವತಿಯಿಂದ ಹಿಜಾಮ ಮತ್ತು ಅಕ್ಯುಪಂಕ್ಚರ್ ಚಿಕಿತ್ಸಾ ಶಿಬಿರ ತಲಪಾಡಿ ಅಬ್ರಾರ್ ಮಸೀದಿಯ ಮದ್ರಸತುಲ್ ಇಸ್ಲಾಮಿಯಾ ಸಭಾಂಗಣದಲ್ಲಿ ನಡೆಯಿತು.
ತಲಪಾಡಿ ಗ್ರಾಪಂ ಮಾಜಿ ಸದಸ್ಯ ಟಿ.ಎಂ. ಇಬ್ರಾಹಿಂ ಹಿಜಾಮ ಚಿಕಿತ್ಸೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಲಪಾಡಿ ಸೋಶಿಯಲ್ ಅಚೀವ್ ಮೆಂಟ್ ಫೋರಂ ಅಧ್ಯಕ್ಷ ಟಿ.ಎಚ್. ಮೊಹಮ್ಮದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಲಪಾಡಿ ಅಬ್ರಾರ್ ಮಸೀದಿಯ ಅಧ್ಯಕ್ಷ ಜಿ.ಅಬ್ಬಾಸ್, ಉದ್ಯಮಿ ಜನಾಬ್ ಇಬ್ರಾಹಿಂ ಹುಸೈನ್, ತಲಪಾಡಿ ಅಬ್ರಾರ್ ಮಸೀದಿಯ ಸದಸ್ಯ ಇಸ್ಮಾಯಿಲ್ ಟಿ., ಮಸೀದಿಯ ಇಮಾಮ್ ಅಮೀನ್, ತಲಪಾಡಿ ಸೋಶಿಯಲ್ ಅಚೀವ್ ಮೆಂಟ್ ಫೋರಂ ಪ್ರಧಾನ ಕಾರ್ಯದರ್ಶಿ ಶಬೀರ್ ಅಬ್ಬಾಸ್ ತಲಪಾಡಿ, ಕೋಶಾಧಿಕಾರಿ ಹುಸೈನ್ ತಲಪಾಡಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿ ಲತೀಫ್ ಎಸ್.ಎ. ನಿರೂಪಿಸಿದರು.
Kshetra Samachara
08/12/2020 05:48 pm